masthmagaa.com:

ಕೊರೋನಾ ಜನ್ಮ ಜಾತಕ ಬಿಚ್ಚಲು ಚೀನಾಗೆ ಹೋಗಿರೋ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ತಂಡ ಈಗ ವುಹಾನ್​ ನಗರವನ್ನ ತಲುಪಿದೆ. ಗಮನಿಸಬೇಕಾದ ಸಂಗತಿ ಅಂದ್ರೆ ಚೀನಾದಲ್ಲಿ ಕೆಲದಿನಗಳಿಂದ ಮತ್ತೆ ಕೊರೋನಾ ಕಾಟ ಶುರುವಾಗಿದೆ. 8 ತಿಂಗಳ ಬಳಿಕ ಮೊದಲ ಕೊರೋನಾ ಸಾವು ಕೂಡ ಸಂಭವಿಸಿದೆ. ಉತ್ತರ ಚೀನಾದಲ್ಲಿ 2 ಕೊಟಿ ಜನರನ್ನ ಲಾಕ್​​​ ಮಾಡಿ ಇಡಲಾಗಿದೆ. ಒಂದು ರಾಜ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಇದೇ ಸಂದರ್ಭದಲ್ಲಿ ಸಾಕಷ್ಟು ವಿಳಂಬದ ಬಳಿಕ WHO ತಂಡ ವುಹಾನ್​ನಲ್ಲಿ ಲ್ಯಾಂಡ್ ಆಗಿದೆ. ಈ ತಂಡದಲ್ಲಿ 10 ವಿಜ್ಞಾನಿಗಳ ತಂಡ ಇದೆ. ಇವರು ತನಿಖೆ ಶುರು ಮಾಡೋ ಮೊದಲು 10 ದಿನಗಳ ಕ್ವಾರಂಟೈನ್ ಮುಗಿಸಬೇಕು ಅಂತ ಷರತ್ತು ಹಾಕಿದೆ ಚೀನಾ. ಈಗಾಗಲೇ ಒಂದು ವರ್ಷ ಡಿಲೇ ಆಗಿದೆ ತನಿಖೆ. ಇನ್ನು 10 ದಿನದಲ್ಲಿ ಕಳ್ಕೊಳೋದೇನು ಅಂತ ತನಿಖಾ ತಂಡ ಇದಕ್ಕೆ ಒಪ್ಪಿಗೆ ನೀಡಿದೆ. ವುಹಾನ್​​ನಲ್ಲಿ ಮೊದಲ ಬಾರಿ ಕಾಯಿಲೆ ಸ್ಫೋಟ ಆಯ್ತು ಅಂದ ಮಾತ್ರಕ್ಕೆ ಇದೇ ಜಾಗ ಕಾಯಿಲೆ ತವರು ಅನ್ನೋಕಾಗಲ್ಲ ಅಂತ ಚೀನಾ ವಾದ ಮಾಡ್ತಾನೇ ಬಂದಿದೆ. ಸರಿ ಹಾಗಾದ್ರೆ ನಾವ್ ಒಂಚೂರು ಚೆಕ್ ಮಾಡ್ತೀವಿ ಅಂತ ಹೊರಟರೆ ಅದಕ್ಕೆ ನಾನಾ ಅಡ್ಡಗಾಲು ಹಾಕ್ತಾನೇ ಬಂದಿತ್ತು ಚೀನಾ. ಈಗ ಬಹುಶಃ ವುಹಾನ್​ನನ್ನು ಪೂರಾ ತೊಳೆದು ಚೊಕ್ಕ ಮಾಡಿ, ಸೇಫ್ ಮಾಡಿಕೊಂಡು, ಫೈನಲಿ ಬನ್ನಿ ತನಿಖೆಗೆ ಅಂತ ಕರೆದಂತೆ ಕಾಣ್ತಿದೆ. ಈಗ ವುಹಾನ್​​ನಲ್ಲಿ ಕೊರೋನಾ ಮೂಲ ಹುಡುಕೋದು ಒಂದೇ, ಸಮುದ್ರದಲ್ಲಿ ಕಳೆದು ಹೋದ ಸೂಜಿ ಹುಡುಕೋದು ಒಂದೆ. ಅದಕ್ಕಿಂತಲೂ ಕಷ್ಟಾನೆ.

-masthmagaa.com

Contact Us for Advertisement

Leave a Reply