ಅಫ್ಘಾನ್‌ನಲ್ಲಿ ತಾಲಿಬಾನಿ ಆಯೋಜಿತ ಸಮಾವೇಶಕ್ಕೆ ಹಾಜರಾಗಿತ್ತಾ ಭಾರತ?

masthmagaa.com:

ಅಫಘಾನಿಸ್ತಾನದಲ್ಲಿ ತಾಲಿಬಾನಿ ಸರ್ಕಾರ ಆಯೋಜಿಸಿದ್ದ ಸಮಾವೇಶದಲ್ಲಿ ಭಾರತ ಭಾಗಿಯಾಗಿದೆ ಅಂತ ವರದಿಯಾಗಿದೆ. ಸೋಮವಾರ ಕಾಬೂಲ್‌ನಲ್ಲಿ ಪ್ರಾದೇಶಿಕ ಸಹಕಾರದ ಉದ್ದೇಶದಿಂದ ತಾಲಿಬಾನ್‌ ಸರ್ಕಾರ ಸಮಾವೇಶ ಆಯೋಜಿಸಿತ್ತು. ಇದ್ರಲ್ಲಿ ಭಾರತ, ರಷ್ಯಾ, ಚೀನಾ, ಇರಾನ್‌, ಪಾಕ್‌ ಸೇರಿದಂತೆ 10 ರಾಷ್ಟ್ರಗಳು ಭಾಗಿಯಾಗಿದ್ವು ಅಂತ ಅಫ್ಘಾನ್ ಮಾ‌ಧ್ಯಮಗಳು ಉಲ್ಲೇಖಿಸಿವೆ. ಆದ್ರೆ ಭಾರತದ ವಿದೇಶಾಂಗ ಸಚಿವಾಲಯ ಇದುವರೆಗೆ ಈ ಸಮಾವೇಶದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನೊಂದ್ಕಡೆ ಭಾರತ ಇದುವರೆಗು ತಾಲಿಬಾನ್‌ ಸರ್ಕಾರವನ್ನ ಅಫೀಶಿಯಲ್‌ ಆಗಿ ಗುರುತಿಸಿಲ್ಲ.

-masthmagaa.com

Contact Us for Advertisement

Leave a Reply