ಮಾರಿಷಸ್‌ನಲ್ಲಿ ಭಾರತದ ರಹಸ್ಯ ನೌಕಾನೆಲೆ!

masthmagaa.com:

ಇಡೀ ವಿಶ್ವದ ದೊಡ್ಡಣ್ಣನಾಗ್ತೀನಿ ಅಂತ ಬಾಯಿ ಕಳ್ಕೊಂಡು ಕೂತಿರೋ ಚೀನಾಗೆ ಭಾರತ ತಕ್ಕ ತಿರುಗೇಟು ಕೊಟ್ಟಿದೆ. ಭಾರತದ ಬಹುತೇಕ ವ್ಯಾಪಾರ ಹಿಂದೂ ಮಹಾಸಾಗರದ ಮೂಲಕವೇ ನಡೆಯುತ್ತೆ. ದಕ್ಷಿಣ ಚೀನಾ ಸಮುದ್ರ ನಂದೇ ಅಂತ ಹೇಳಿಕೊಳ್ಳೋ ಚೀನಾ, ಹಿಂದೂ ಮಹಾಸಾಗರದಲ್ಲೂ ಕಂಟ್ರೋಲ್​​ಗೆ ಏನೇನ್ ಬೇಕೋ ಎಲ್ಲವನ್ನೂ ಮಾಡ್ತಾ ಇದೆ. ಹೀಗಾಗಿ ಭಾರತ ಕೂಡ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಹಿಂದೂ ಮಹಾಸಾಗರದಲ್ಲಿರೋ ಮಾರಿಷಸ್​ನ ದ್ವೀಪವಾದ ಅಗಾಲೆಗಾದಲ್ಲಿ ಒಂದು ನೌಕಾನೆಲೆ ನಿರ್ಮಾಣ ಮಾಡ್ತಿದೆ. ಜನ ಕಡಿಮೆ ಇರುವ, ತುಂಬಾ ಚಿಕ್ಕದಾದ ದ್ವೀಪ ಇದಾಗಿದೆ. 630 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನೌಕಾನೆಲೆಗೆ ಭಾರತ ಮುಂದಾಗಿದ್ದು, ಇಲ್ಲಿಗೆ 8 ಯುದ್ಧ ನೌಕೆಗಳನ್ನು ಕಳುಹಿಸಲಿದೆ ಅಂತ ವರದಿಯಾಗಿದೆ. ಇದ್ರ ಸುತ್ತಮುತ್ತಲಿನ ದ್ವೀಪಗಳಲ್ಲಿ ಅಮೆರಿಕ, ಫ್ರಾನ್ಸ್​​, ಚೀನಾದ ದ್ವೀಪಗಳು ಕೂಡ ಇವೆ. ಈಗ ಭಾರತ ನೌಕಾನೆಲೆ ನಿರ್ಮಿಸುತ್ತಿರುವ ಅಗಲೆಗಾ ದ್ವೀಪ ಮಾರಿಷಸ್​ ಮುಖ್ಯ ದ್ವೀಪದಿಂದ 1100 ಕಿಲೋಮೀಟರ್ ದೂರದಲ್ಲಿದೆ. 12 ಕಿಲೋಮೀಟರ್ ಉದ್ದ ಮತ್ತು ಒಂದೂವರೆ ಕಿಲೋಮೀಟರ್ ಅಗಲದ ಈ ದ್ವೀಪದಲ್ಲಿ ಹೆಚ್ಚು ಕಡ್ಮೆ 300 ಮನೆಗಳಿವೆ. ಇಲ್ಲಿ 3 ಕಿಲೋಮೀಟರ್ ಉದ್ದದ ರನ್​ ವೇ ನಿರ್ಮಿಸಲಾಗಿದೆ. ಸಮುದ್ರದ ಮೇಲೆ ಆಗಸದಲ್ಲಿ ಗಸ್ತು ತಿರುಗೋ ಯುದ್ಧ ವಿಮಾನಗಳು ಇಲ್ಲಿ ಲ್ಯಾಂಡ್ ಆಗಲು ಬಳಸಿಕೊಳ್ತಿದೆ. ಇಲ್ಲಿ ಭಾರತದ ಗುಪ್ತಚರ ವ್ಯವಸ್ಥೆ ಕೂಡ ಇದೆ. ಇದ್ರ ಮೂಲಕ ನೈರುತ್ಯ ಹಿಂದೂ ಮಹಾಸಾಗರ ಮತ್ತು ಮೊಜಾಂಬಿಕ್ ಚಾನಲ್​​​ನಲ್ಲಿ ಭಾರತ ತನ್ನ ವಾಯು ಮತ್ತು ನೌಕಾಪಡೆಯ ಉಪಸ್ಥಿತಿಯನ್ನು ಸಾಧಿಸುತ್ತೆ. 2015ರಲ್ಲಿ ಪ್ರಧಾನಿ ಮೋದಿ ಮಾರಿಷಸ್​​ಗೆ ಹೋಗಿದ್ದಾಗ ಹಲವು ಒಪ್ಪಂದಗಳು ಏರ್ಪಟ್ಟಿದ್ವು. ಇದ್ರಲ್ಲಿ ಅಗಲೇಗಾ ಮಹಾದ್ವೀಪದ ಅಭಿವೃದ್ಧಿ ವಿಚಾರವೂ ಸೇರಿತ್ತು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾರಿಷಸ್​, ನಮ್ಮ ಮತ್ತು ಭಾರತದ ನಡುವೆ ಆ ರೀತಿಯ ಯಾವುದೇ ಒಪ್ಪಂದ ನಡೆದಿಲ್ಲ. ಅಗಲೇಗಾ ದ್ವೀಪದಲ್ಲಿ ಆ ರೀತಿಯ ಯಾವುದೇ ನೌಕಾ ಅಥವಾ ವಾಯುನೆಲೆ ನಿರ್ಮಾಣವಾಗ್ತಿಲ್ಲ ಅಂತ ಹೇಳಿದೆ. ಆದ್ರೆ ಉಪಗ್ರಹ ಚಿತ್ರದಲ್ಲಿ ಅಗಲೇಗಾ ದ್ವೀಪದಲ್ಲಾಗ್ತಿರೋ ಬೆಳವಣಿಗೆಗಳು ಸ್ಪಷ್ಟವಾಗಿ ಗೊತ್ತಾಗ್ತಿದೆ.

-masthmagaa.com

Contact Us for Advertisement

Leave a Reply