ಬಾಂಗ್ಲಾ, ಪಾಕ್​, ಆಫ್ಗನ್ ನಾಗರಿಕರಿಗೆ ಪೌರತ್ವ ನೀಡಲು ಸಿದ್ಧತೆ!

masthmagaa.com:

ಸಿಎಎ ಅಂದ್ರೆ ನಾಗರಿಕತ್ವ ತಿದ್ದುಪಡಿ ಮಸೂದೆಗೆ ಭಾರಿ ವಿರೋಧ ವ್ಯಕ್ತವಾದ ಬಳಿಕ ಈಗ ಕೇಂದ್ರ ಗೃಹ ಇಲಾಖೆ ಅಧಿಸೂಚನೆಯೊಂದನ್ನ ಹೊರಡಿಸಿದೆ. ಈ ಮೂಲಕ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳ ಅಲ್ಪ ಸಂಖ್ಯಾತ ವಲಸಿಗರು ಭಾರತದ ನಾಗರಿಕತ್ವಕ್ಕಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ. ಎಲ್ಲಾ ಕಡೆಗಳಲ್ಲಿ ಅಲ್ಲ.. ಗುಜರಾತ್, ರಾಜಸ್ಥಾನ, ಛತ್ತೀಸ್​​ಗಡ, ಹರಿಯಾಣ ಮತ್ತು ಪಂಜಾಬ್​​ನ 13 ಜಿಲ್ಲೆಗಳಲ್ಲಿರೋ ಹಿಂದೂ, ಕ್ರೈಸ್ತ, ಸಿಖ್​, ಜೈನ ಮತ್ತು ಬೌದ್ಧ ಧರ್ಮದವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ 2014ರ ಡಿಸೆಂಬರ್​ 30ಕ್ಕೂ ಮುನ್ನ ಭಾರತಕ್ಕೆ ಬಂದ ಆ ದೇಶಗಳ ಅಲ್ಪ ಸಂಖ್ಯಾತರಿಗೆ ನಾಗರಿಕತ್ವ ನೀಡೋ ಕಾಯ್ದೆ ಇದಾಗಿದೆ.

-masthmagaa.com

Contact Us for Advertisement

Leave a Reply