ಗಲ್ವಾನ್​ನಲ್ಲಿ ಗಾಯಗೊಂಡ ಯೋಧನ ಕೈಗೆ ಒಲಿಂಪಿಕ್ಸ್​ ಟಾರ್ಚ್ ಕೊಟ್ಟ ಚೀನಾ!

masthmagaa.com:

ಇನ್ನು ಗಾಲ್ವಾನ್​ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡು, ಚೇತರಿಸಿಕೊಂಡ ಯೋಧನನ್ನ ಬೀಜಿಂಗ್ ವಿಂಟರ್ ಒಲಿಂಪಿಕ್ಸ್​ನ ಟಾರ್ಚ್​​ಬೇರರ್​ ಆಗಿ ಮಾಡಿದ ಚೀನಾ ನಡೆಯನ್ನ ಅಮೆರಿಕ ಖಂಡಿಸಿದೆ. ಭಾರತದ ಮೇಲೆ ದಾಳಿ ಮಾಡಿದ ಮತ್ತು ಉಘರ್ ಮುಸ್ಲಿಮರ ನರಮೇಧ ಮಾಡಿದ ಮಿಲಿಟರಿ ಕಮಾಂಡ್​ನ ಭಾಗವಾಗಿರುವ ವ್ಯಕ್ತಿಯನ್ನ ಚೀನಾ ಟಾರ್ಚ್​ಬೇರರ್​ ಆಗಿ ಆಯ್ಕೆ ಮಾಡಿಕೊಂಡಿದ್ದು ನಾಚಿಕೆಗೇಡಿನ ಸಂಗತಿ ಅಂತ ಯುಎಸ್ ಸೆನೆಟ್​ ಫಾರಿನ್​ ರಿಲೇಷನ್ಸ್​ ಕಮಿಟಿ ರ್ಯಾಂಕಿಂಗ್ ಮೆಂಬರ್​ ಜಿಮ್​ ರಿಚ್​ ಹೇಳಿದ್ದಾರೆ. ಪೀಪಲ್ಸ್ ಲಿಬರೇಷನ್​ ಆರ್ಮಿಯ ಷಿನ್​ಜಿಯಾಂಗ್​ ಮಿಲಿಟರಿ ಕಮಾಂಡ್​​ನ ರೆಜಿಮೆಂಟಲ್​ ಕಮಾಂಡರ್ ಆಗಿರೋ ಕಿ ಫಬಾವೋ (Qi Fabao) ತಲೆಗೆ ಗಾಲ್ವಾನ್​ ಸಂಘರ್ಷದಲ್ಲಿ ಗಂಭೀರ ಪೆಟ್ಟಾಗಿತ್ತು. ಆತನನ್ನೇ ಚೀನಾ ವಿಂಟರ್ ಒಲಿಂಪಿಕ್ಸ್​ನ ಟಾರ್ಚ್​​ಬೇರರ್​ ಆಗಿ ಆಯ್ಕೆ ಮಾಡಿದೆ. ಇದು ವಿಂಟರ್ ಒಲಿಂಪಿಕ್ಸ್​ ಅನ್ನ ರಾಜಕೀಯ ಮಾಡೋ ಪ್ರಯತ್ನ ಅಂತ ಚೀನಾ ವಿರುದ್ಧ ಟೀಕೆಗಳು ಕೇಳಿ ಬರ್ತಿವೆ. ಇದನ್ನ ಹೊರತುಪಡಿಸಿದ್ರೆ, ಹಾಂಗ್ ಕಾಂಗ್ ಮೂಲದ ನಟ ಜಾಕಿ ಚಾನ್​ ಚೀನಾ ಮಹಾಗೋಡೆ ಮೇಲೆ ಒಲಿಂಪಿಕ್​ ಟಾರ್ಚ್​ ಹೊತ್ತು ಗಮನಸೆಳೆದ್ರು.

-masthmagaa.com

Contact Us for Advertisement

Leave a Reply