ಟ್ವಿಟ್ಟರ್​ ಇಂಡಿಯಾ ಮುಖ್ಯಸ್ಥನಿಗೆ ಯುಪಿ ಪೊಲೀಸರ ಸಮನ್ಸ್​!

masthmagaa.com:

ಟ್ವಿಟರ್​​​​ಗೆ ನೀಡಲಾಗಿದ್ದ ಕಾನೂನು ರಕ್ಷಣೆಯನ್ನ ತೆಗೆದು ಹಾಕಿದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಟ್ವಿಟರ್ ಮೇಲೆ ಕೇಸ್ ದಾಖಲಿಸಿದ್ದರು. ಗಾಝಿಯಾಬಾದ್ ವೈರಲ್ ವಿಡಿಯೋ ಕೇಸ್​​ನ ಎಫ್ಐಆರ್​​ನಲ್ಲಿ ಟ್ವಿಟರ್ ಅನ್ನೂ ಸೇರಿಸಲಾಗಿತ್ತು. ಈ ಸಂಬಂಧ ಮಾತಾಡಿರೋ ಗಾಝಿಯಾಬಾದ್ ಎಸ್ಪಿ ಐರಾಝ್ ರಾಝಾ, ನಾವು ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರಿಗೆ ಸಮನ್ಸ್ ನೀಡಿದ್ದೇವೆ. ಒಂದು ವಾರದ ಒಳಗೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ. ನಮ್ಮ ತನಿಖೆಗೆ ಅವರು ಸಹಕರಿಸುತ್ತಾರೆ ಅನ್ನೋ ವಿಶ್ವಾಸ ಇದೆ ಅಂತ ಹೇಳಿದ್ದಾರೆ. ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳನ್ನ ಟ್ವಿಟರ್ ಫಾಲೋ ಮಾಡದ ಕಾರಣ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅನ್ವಯ ಕೊಡಲಾಗಿದ್ದ ಲೀಗಲ್ ಇಮ್ಯುನಿಟಿಯನ್ನ ಟ್ವಿಟರ್ ಕಳೆದುಕೊಂಡಿದೆ ಅಂತ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು. ಇದಾದ ಮೊದಲ ದಿನವೇ ಬೋಣಿಗೆ ಮಾಡಿದ ಉತ್ತರ ಪ್ರದೇಶ ಪೊಲೀಸರು ಕೇಸ್ ಜಡಿದಿದ್ದರು. ಈ ನಡುವೆ ಮಾಹಿತಿ ತಂತ್ರಜ್ಞಾನ ಸಂಬಂಧ ಪಾರ್ಲಿಮೆಂಟ್ ಸಂಸತ್ ಸ್ಥಾಯಿ ಸಮಿತಿ ಟ್ವಿಟರ್ ಸಂಬಂಧ ಇವತ್ತು ವಿಚಾರಣೆ ನಡೆಸಿದೆ. ಟ್ವಿಟರ್ ಅಧಿಕಾರಿಗಳು ಈ ವಿಚಾರಣೆಗೆ ಹಾಜರಾಗಿದ್ದರು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply