ಕಾಂಗ್ರೆಸ್‌ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ! ಏನದು?

masthmagaa.com:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಹೊಸದಾಗಿ ‘YST’ ತೆರಿಗೆ ಶುರುವಾಗಿದೆ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. YST ಅಂದ್ರೆ ಏನು ಅನ್ನೋ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ನಡೆಸುವ ಘನಂದಾರಿ ವ್ಯಕ್ತಿಗಳನ್ನ ಕೇಳಿ? ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ? ಅಂತ ಹೇಳಿದ್ದಾರೆ. ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದಾಗ ಹಣ ಕೊಟ್ಟು ಹುದ್ದೆ ಪಡೆಯಲು ಬಂದವ್ರನ್ನ ದೂರ ಇಟ್ಟಿದ್ದೆ. BDA ಮೇಲೆ ಕೂರಲು ಬಂದ ಅಧಿಕಾರಿಯನ್ನ ಹೊರಗಟ್ಟಿದ್ದೆ. ಜೊತೆಗೆ ಯಲಹಂಕ ತಹಶೀಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡುತ್ತೇವೆ ಅಂದೋರನ್ನೂ ಆಚೆ ಇಟ್ಟಿದ್ದೆ. ಆದ್ರೆ ಕಾಂಗ್ರೆಸ್‌ನವರು ಈಗ YST ತೆರಿಗೆ ಶುರು ಮಾಡಿಕೊಂಡಿದ್ದಾರೆ ಅಂತ ಯತೀಂದ್ರ ಹಾಗೂ ಸಿದ್ದರಾಮಯ್ಯ ಅವರ ಹೆಸರನ್ನ ಹೇಳದೆ ಪರೋಕ್ಷವಾಗಿ ಟೀಕಿಸಿದ್ದಾರೆ. ಇನ್ನು ಇದೇ ವಿಚಾರವನ್ನ ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡಿರೋ ಹೆಚ್‌ಡಿಕೆ, ಸಿಎಂ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್‌ ಮಾಡಲಾಗ್ತಿದೆ. ತಮ್ಮ ಕೆಲಸ ಆಗೋಕೆ ಶಾಸಕರ ಶಿಫಾರಸ್ಸು ಇದ್ರೆ ಸಾಕಾಗಾಲ್ಲ ಜೊತೆಗೆ 30 ಲಕ್ಷ ರೂಪಾಯಿ ದುಡ್ಡು ತನ್ನಿ ಅಂತ ಹೇಳ್ತಿದ್ದಾರೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply