ಯುವ ಚಿತ್ರೀಕರಣ ಆರಂಭ ! ಶುರುವಾಗಲಿದೆ ಯುವ ಪರ್ವ..

masthmagaa.com:

“ಯುವ’ ಚಿತ್ರದ ಮೂಲಕ ಯುವರಾಜ್‌ ಕುಮಾರ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವುದು ತಿಳಿದಿರೋ ಸಂಗತಿ . ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನಡೆದಿತ್ತು. ಈಗ ಚಿತ್ರತಂಡ ಚಿತ್ರೀಕರಣಕ್ಕೆ ಅಣಿಯಾಗಿದ್ದು, ಮೊದಲ ಹಂತವಾಗಿ ಚಿತ್ರದ ಸೆಟ್‌ ವರ್ಕ್‌ ಆರಂಭವಾಗಿದೆ.ಈ ವಿಚಾರವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ‘ಯುವ’ ಕ್ಯಾಮರಾ ಮುಂದೆ ನಿಂತಿದ್ದು ಸಂತೋಷ್ ಆನಂದ್‌ ರಾಮ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರತಂಡ ಬೆಂಗಳೂರಿನಲ್ಲಿ ದೊಡ್ಡ ಸೆಟ್‌ನೊಂದಿಗೆ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಕಳೆದ ಕೆಲ ದಿನಗಳಿಂದ ‘ಯುವ’ ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್ ನಿರ್ಮಾಣ ಮಾಡುವ ಕೆಲಸ ನಡೀತಿತ್ತು. ಇದೀಗ ಎಲ್ಲವೂ ಸಿದ್ಧವಾಗಿದ್ದು ಭಾನುವಾರವೇ ಫಸ್ಟ್ ಶಾಟ್ ಚಿತ್ರೀಕರಣ ಆರಂಭವಾಗಿದೆ.

ಯುವರಾಜ್‌ಕುಮಾರ್‌ ಚೊಚ್ಚಲ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಿಸುತ್ತಿದೆ. ಈಗಾಗಲೇ ಕೆಜಿಎಫ್, ಕಾಂತಾರ ಸೇರಿದಂತೆ ಹಲವು ವಿಭಿನ್ನ ಸಿನಿಮಾಗಳ ಮೂಲಕ ಪ್ರತಿಷ್ಠಿತ ಬ್ಯಾನರ್‌ ಎನಿಸಿಕೊಂಡಿರುವ ಹೊಂಬಾಳೆ ಈಗ ಯುವರಾಜ್‌ಕುಮಾರ್‌ ಅವರನ್ನು ಲಾಂಚ್‌ ಮಾಡುವ ಜವಾಬ್ದಾರಿ ತೆಗೆದುಕೊಂಡಿದೆ.

-masthmagaa.com

Contact Us for Advertisement

Leave a Reply