ಸಿಬಿಐ ಕಸ್ಟಡಿಯಲ್ಲಿದ್ದ 103 ಕೆ.ಜಿ ಚಿನ್ನ ಕಾಣೆ..! ಕದ್ದಿದ್ದು ಯಾರು..?

masthmagaa.com:

ತಮಿಳುನಾಡು: ಸಿಬಿಐ ಕಸ್ಟಡಿಯಲ್ಲಿದ್ದ 103 ಕೆಜಿಯಷ್ಟು ಚಿನ್ನ ನಾಪತ್ತೆಯಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಸುಮಾರು 45 ಕೋಟಿ ರೂಪಾಯಿ ಮೊತ್ತದ ಚಿನ್ನ ಇದಾಗಿದೆ. ಈ ಸಂಬಂಧ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್​​ ಸಿಬಿ-ಸಿಐಡಿಗೆ ಆದೇಶಿಸಿದ್ದು, ಈ ಮೂಲಕ ಪ್ರಕರಣ ಬಯಲಿಗೆ ಬಂದಿದೆ. 2012ರಲ್ಲಿ ಸಿಬಿಐ ಚೆನ್ನೈನ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಮೇಲೆ ದಾಳಿ ನಡೆಸಿದಾಗ 400.5 ಕೆಜಿಯಷ್ಟು ಚಿನ್ನಾಭರಣ ಪತ್ತೆಯಾಗಿತ್ತು. ಅದನ್ನು ಸಿಬಿಐ ಅದೇ ಸಂಸ್ಥೆಯ ಕಟ್ಟಡದಲ್ಲಿ ಇಟ್ಟು ಸೀಲ್ ಮಾಡಿತ್ತು.

ಸಿಬಿಐ ಅಧಿಕಾರಿಗಳು ಹೇಳುವ ಪ್ರಕಾರ, ಆ ಸಂಸ್ಥೆಯ ಕಟ್ಟಡದ ಒಟ್ಟು 72 ಕೀಲಿ ಕೈಗಳನ್ನು ಪ್ರಕರಣ ಸಂಬಂಧ ಚೆನ್ನೈ ವಿಶೇಷ ನ್ಯಾಯಾಲಯಕ್ಕೆ ಹಸ್ತಾಂತರ ಮಾಡಿದ್ದರು. ಆದ್ರೆ ಮದ್ರಾಸ್​​ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಮಾತ್ರ ಸಿಬಿಐ ಅಧಿಕಾರಿಗಳ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಜೊತೆಗೆ ಸಿಬಿ-ಸಿಐಡಿಯ ಎಸ್​​​ಪಿ ರ್ಯಾಂಕ್​​​ನ ಅಧಿಕಾರಿಗಳಿಗೆ ಈ ಪ್ರಕರಣವನ್ನು ವಹಿಸಿದ್ದು, 6 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply