ರಾಗಿಣಿ ಹಿಂದೆಯೇ ಪರಪ್ಪನ ‘ಪಂಜರ’ ಸೇರಿದ ಸಂಜನಾ ಗಲ್ರಾನಿ

masthmagaa.com:

ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಅರೆಸ್ಟ್ ಆಗಿದ್ದ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ನಟಿಯ ಸಿಸಿಬಿ ಕಸ್ಟಡಿ ಇಂದಿಗೆ ಅಂತ್ಯಗೊಳ್ಳಬೇಕಾದ ಹಿನ್ನೆಲೆ ಅವರನ್ನು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ಮುಂದೆ ಹಾಜರುಪಡಿಸಲಾಯ್ತು. ಕೋರ್ಟ್ ಸಂಜನಾ ಗಲ್ರಾನಿಗೆ​ 2 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಸೆಪ್ಟೆಂಬರ್ 18ರವರೆಗೆ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ಜೊತೆಗೆ ಪ್ರಕರಣವನ್ನು ಎನ್​ಡಿಪಿಎಸ್​ ವಿಶೇಷ ಕೋರ್ಟ್​ಗೆ ವರ್ಗಾಯಿಸಲಾಗಿದೆ.

ಈ ಹಿಂದೆ ಇದೇ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟಿ ರಾಗಿಣಿ ದ್ವಿವೇದಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಈಗಾಗಲೇ ಪರಪ್ಪನ ‘ಪಂಜರ’ವನ್ನು ಸೇರಿದ್ದಾರೆ. ಇದೀಗ ಸಂಜನಾಗೂ ಅದೇ ಪರಿಸ್ಥಿತಿ ಎದುರಾಗಿದೆ. ಆದ್ರೆ ಕೇವಲ ಎರಡು ದಿನ ಅನ್ನೋದು ಗಮನಾರ್ಹ.

ಮತ್ತೊಂದುಕಡೆ ಆರೋಪಿಗಳಾದ ವಿರೇನ್ ಖನ್ನಾ ಮತ್ತು ರವಿಶಂಕರ್​ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಇವರಿಬ್ಬರೂ ಕೂಡ ಮುಂದಿನ 14 ದಿನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯಲಿದ್ದಾರೆ.

-masthmagaa.com

Contact Us for Advertisement

Leave a Reply