masthmagaa.com:

ದೇಶದಲ್ಲಿ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ, ಭಾರತ್ ಬಯೋಟೆಕ್ ಮತ್ತು ಫೈಝರ್​​ ಕಂಪನಿಗಳು ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿವೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಜೊತೆಗೆ ಭಾರತದಲ್ಲಿ ಒಟ್ಟು 8 ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ಇದರಲ್ಲಿ ಕೆಲವೊಂದು ಲಸಿಕೆ ಮುಂದಿನ ಕೆಲ ವಾರಗಳಲ್ಲೇ  ಲೈಸೆನ್ಸ್ ಪಡೆಯಲಿವೆ. ವಿಜ್ಞಾನಿಗಳು ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೇ ಲಸಿಕೆಯನ್ನ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತೆ. ಅದಕ್ಕಾಗಿ ನಾವು ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದ್ದೇವೆ ಅಂತ ಆರೋಗ್ಯ ಇಲಾಖೆ ಹೇಳಿದೆ.

ದೇಶದಲ್ಲಿ ಪ್ರಯೋಗ ನಡೆಯುತ್ತಿರುವ ಕೊರೋನಾ ಲಸಿಕೆಗಳು:

1. ಕೋವಿಶೀಲ್ಡ್: ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ – 2 ಮತ್ತು 3ನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ – ತುರ್ತು ಬಳಕೆಗೆ ಅನುಮತಿ ಕೋರಿದೆ

2. ಕೋವಾಕ್ಸಿನ್: ಭಾರತ್ ಬಯೋಟೆಕ್​ – 3ನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ – ತುರ್ತು ಬಳಕೆಗೆ ಅನುಮತಿ ಕೋರಿದೆ

3. ZyCoV-D: ಕ್ಯಾಡಿಲಾ ಹೆಲ್ತ್​ಕೇರ್ ಲಿಮಿಟೆಡ್ – 2ನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ

4. ಸ್ಪುಟ್ನಿಕ್​-V: ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ – 2ನೇ ಹಂತದ ಮಾನವ ಪ್ರಯೋಗ ಮುಗಿದಿದ್ದು, ಮುಂದಿನ ವಾರದಿಂದ 3ನೇ ಹಂತ ಪ್ರಾರಂಭಿಸಲಿದೆ

5. NVX-CoV2373: ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ – 3ನೇ ಹಂತದ ಮಾನವ ಪ್ರಯೋಗ ಪರಿಗಣನೆಯಲ್ಲಿದೆ

6. Recombinant Protein Antigen based vaccine: ಬಯೋಲಾಜಿಕಲ್ ಇ ಲಿಮಿಟೆಡ್ – ಪ್ರಾಣಿಗಳ ಮೇಲಿನ ಪ್ರಿ ಕ್ಲಿನಿಕಲ್ ಪ್ರಯೋಗ ಮುಗಿದಿದೆ

7. HGCO 19: ಜೆನೋವಾ – ಪ್ರಿ ಕ್ಲಿನಿಕಲ್ ಪ್ರಯೋಗ ಮುಗಿದಿದ್ದು 1 ಮತ್ತು 2ನೇ ಹಂತದ ಮಾನವ ಪ್ರಯೋಗ ಆರಂಭವಾಗಲಿದೆ

8. Inactivated rabies vector Platform: ಭಾರತ್ ಬಯೋಟೆಕ್ – ಪ್ರಿ ಕ್ಲಿನಿಕಲ್ ಹಂತದಲ್ಲಿದೆ

-masthmagaa.com

Contact Us for Advertisement

Leave a Reply