ಡ್ರಗ್‌ ಪ್ರಕರಣ: ಬಾಲಿವುಡ್‌ ಹಾಸ್ಯನಟಿ ದಂಪತಿಗೆ ಜಾಮೀನು

masthmagaa.com:

ಬಾಲಿವುಡ್‌ ಡ್ರಗ್ಸ್​‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯಿಂದ ಬಂಧಿತರಾಗಿದ್ದ ಹಾಸ್ಯನಟಿ ಭಾರ್ತಿ ಸಿಂಗ್‌ ಹಾಗೂ ಆಕೆಯ ಪತಿ ಹಾರ್ಷ್‌ ಲಿಂಬಾಚಿಯಾಗೆ ಮುಂಬೈ ಕೋರ್ಟ್‌ ಜಾಮೀನು ನೀಡಿದೆ. ನಿನ್ನೆಯಷ್ಟೇ ಕೋರ್ಟ್‌ ಭಾರ್ತಿ ಸಿಂಗ್ ಹಾಗೂ ಆಕೆಯ ಪತಿಯನ್ನು ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಬಳಿಕ ಆರೋಪಿಗಳ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿದೆ.

ಬಾಲಿವುಡ್​ ಡ್ರಗ್ಸ್ ನಂಟು ಆರೋಪದಡಿ ಎನ್​ಸಿಬಿ ಅಧಿಕಾರಿಗಳು ನವೆಂಬರ್ 21ರಂದು ನಟಿ ಭಾರ್ತಿ ಸಿಂಗ್​​ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 80 ಗ್ರಾಂಗೂ ಹೆಚ್ಚು ಮಾದಕ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಆಕೆ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿತ್ತು.

-masthmagaa.com

Contact Us for Advertisement

Leave a Reply