masthmagaa.com:

ಕೊರೋನಾ ವೈರಸ್​ಗೆ ಲಸಿಕೆ ಬಂದ ಬಳಿಕವೂ ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳು ದೀರ್ಘಾವಧಿವರೆಗೆ ಮುಂದುವರಿಯಲಿದೆ ಅಂತ ಐಸಿಎಂಆರ್ ಪ್ರಧಾನ ನಿರ್ದೇಶಕ ಬಲ್ರಾಮ್ ಭಾರ್ಗವ ಹೇಳಿದ್ದಾರೆ. ಮಾಸ್ಕ್ ಅನ್ನೋದು ಬಟ್ಟೆಯ ಲಸಿಕೆ ಇದ್ದಂತೆ. ಕೊರೋನಾ ಹರಡುವುದನ್ನ ತಡೆಯುವುದರಲ್ಲಿ ಮಾಸ್ಕ್ ನೀಡಿದ ಕೊಡುಗೆಯನ್ನ ಮರೆಯಲು ಸಾಧ್ಯವಿಲ್ಲ. ಭಾರತದಲ್ಲಿ ಒಟ್ಟು 5 ಲಸಿಕೆಗಳ ಮಾನವ ಪ್ರಯೋಗ ನಡೆಯುತ್ತಿದೆ. ಎರಡು ಲಸಿಕೆಗಳನ್ನ ಭಾರತವೇ ಅಭಿವೃದ್ಧಿಪಡಿಸುತ್ತಿದ್ದು, ಮೂರು ಲಸಿಕೆಗಳು ಬೇರೆ ದೇಶದ್ದಾಗಿದೆ. ಆದ್ರೆ ಕೋರೊನಾವನ್ನ ಕೊನೆಗಾಣಿಸಲು ಲಸಿಕೆಯಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ನಾವು ಮುಂಜಾಗ್ರತಾ ಕ್ರಮಗಳನ್ನ ಪಾಲಿಸಲೇಬೇಕು ಅಂತ ಅವರು ಹೇಳಿದ್ದಾರೆ. ಜೊತೆಗೆ ಕೊರೋನಾ ಬಂದು ಗುಣಮುಖರಾದವರನ್ನ ಕೂಡ ಮಾಸ್ಕ್ ರಕ್ಷಿಸುತ್ತೆ ಅಂತ ಬಲ್ರಾಮ್ ಭಾರ್ಗವ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply