ಖಾಲಿ ರಸ್ತೇಲಿ ಜಾಲಿರೈಡ್​: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

masthmagaa.com:

ಬೆಂಗಳೂರು: ಕೊರೋನಾ ವೈರಸ್​ ತಡೆಗಟ್ಟಲು ಲಾಕ್​ಡೌನ್​ ಹೇರಿದ್ದು, ಎಲ್ಲರೂ ಮನೆಯಲ್ಲಿ ಇರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅನಗತ್ಯವಾಗಿ ರಸ್ತೆಗೆ ಇಳಿದ ವಾಹನಗಳನ್ನ ಪೊಲೀಸರು ಸೀಜ್ ಮಾಡ್ತಿದ್ದಾರೆ. ಇಷ್ಟಾದ್ರೂ ಬೆಂಗಳೂರಿನ ಖಾಲಿ ರಸ್ತೆಗಳಲ್ಲಿ ಜಾಲಿರೈಡ್ ಮಾಡ್ತಿದ್ದ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತವಾಗಿದೆ.

ಅಂದ್ಹಾಗೆ ಶರ್ಮಿಳಾ ಮಾಂಡ್ರೆ ತಮ್ಮ ಸ್ನೇಹಿತರ ಜೊತೆ ಜಾಗ್ವಾರ್ ಕಾರಿನಲ್ಲಿ ಬೆಳಗಿನಜಾವ 3 ಗಂಟೆ ಸುಮಾರಿಗೆ ಸುತ್ತಾಡುತ್ತಿದ್ದರು. ಈ ವೇಳೆ ವಸಂತನಗರ ಕೆಳಸೇತುವೆಯಲ್ಲಿ ಅವರ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಅವರ ಸ್ನೇಹಿತನಿಗೆ ಗಾಯಗಳಾಗಿವೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply