ಕೋವ್ಯಾಕ್ಸಿನ್ ಹಾಕಿಸಿಕೊಂಡ ವ್ಯಕ್ತಿಗೆ ಅಲರ್ಜಿ, ಆಸ್ಪತ್ರೆಗೆ ದಾಖಲು!

masthmagaa.com:

ದೆಹಲಿ: ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ ಏಮ್ಸ್​ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್​ ಒಬ್ಬರಿಗೆ ಅಲರ್ಜಿಯಾಗಿದೆ. ಜೊತೆಗೆ ಕೆಲವೊಂದು ಅಡ್ಡಪರಿಣಾಮಗಳಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ನಮ್ಮ 20 ವರ್ಷದ ಸೆಕ್ಯೂರಿಟಿ ಗಾರ್ಡ್​​ಗೆ ಸಂಜೆ 4 ಗಂಟೆ ವೇಳೆಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿತ್ತು. ಆದ್ರೆ ಲಸಿಕೆ ಹಾಕಿದ 15-20 ನಿಮಿಷಗಳ ಬಳಿಕ ಚರ್ಮದ ಮೇಲೆ ಗುಳ್ಳೆಗಳೆದ್ದು, ಅಲರ್ಜಿಯಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಅಂತ ಹೇಳಿದ್ದಾರೆ. ಒಟ್ಟಾರೆಯಾಗಿ ದೆಹಲಿಯಲ್ಲಿ ಲಸಿಕೆ ಹಾಕಿಸಿಕೊಂಡ 51 ಮಂದಿಗೆ ಸಣ್ಣಪುಟ್ಟ ಸಮಸ್ಯೆಗಳಾಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಕೋವ್ಯಾಕ್ಸಿನ್​​​ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕೋವ್ಯಾಕ್ಸಿನ್ ಇನ್ನೂ 3ನೇ ಹಂತದ ಪ್ರಯೋಗದಲ್ಲಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು ಸರಿಯಲ್ಲ ಅಂತ ವಿಪಕ್ಷಗಳು ಟೀಕಿಸಿದ್ದವು.

-masthmagaa.com

 

Contact Us for Advertisement

Leave a Reply