ದೆಹಲಿ ಮಸೀದಿ ಖಾಲಿ ಮಾಡಲು ಒಪ್ಪಿಸಿದ್ದು ಅಜಿತ್ ಧೋವಲ್​​​..!

masthmagaa.com:

ದೆಹಲಿಯ ನಿಜಾಮುದ್ದಿನ್ ಮರ್ಕಝ್​ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೊರೋನಾ ಸೋಂಕು ಪತ್ತೆಯಾಗ್ತಿರೋದು ದೇಶದಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣ ಬೆಳಕಿಗೆ ಬಂದಾಗಲೇ ನಿಜಾಮುದ್ದೀನ್ ಪ್ರದೇಶದ ಬಾಂಗ್ಲೆವಲಿ ಮಸೀದಿಯನ್ನು ಖಾಲಿ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು. ಆದ್ರೆ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಮಸೀದಿ ಖಾಲಿ ಮಾಡಿಸಲು ಮುಂದಾದಾಗ ಮಾರ್ಕಜ್​​​ನ ಮುಖ್ಯಸ್ಥ ಮೌಲಾನಾ ಸಾದ್​ ಒಪ್ಪಿರಲಿಲ್ಲ. ಹೀಗಾಗಿ ಗೃಹಸಚಿವ ಅಮಿತ್ ಶಾ ಈ ಜವಾಬ್ದಾರಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್​​​​ಗೆ ನೀಡಿದ್ದರು ಎಂದು ತಿಳಿದುಬಂದಿದೆ.

ಮಾರ್ಚ್​​ 28ರಂದು ಮಧ್ಯರಾತ್ರಿ 2 ಗಂಟೆಗೆ ಮಾರ್ಕಜ್​​​ಗೆ ಆಗಮಿಸಿದ ಅಜಿತ್ ಧೋವಲ್ ಮೌಲಾನ್ ಸಾದ್​ ಅವರೊಂದಿಗೆ ಮಾತುಕತೆ ನಡೆಸಿದ್ರು. ಜೊತೆಗೆ ಮಸೀದಿ ಖಾಲಿ ಮಾಡಲು ಮತ್ತು ಅಲ್ಲಿದ್ದ ಎಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲು ಒಪ್ಪಿಸಿದ್ರು. ಅಲ್ಲದೆ ಇಡೀ ಮಸೀದಿಯನ್ನು ಸ್ಯಾನಿಟೈಸರ್​​ನಿಂದ ಸ್ವಚ್ಛಗೊಳಿಸಲಾಗಿತ್ತು ಅಂತ ತಿಳಿದುಬಂದಿದೆ.

ಇದೀಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 128 ಮಂದಿಯಲ್ಲಿ ಸೋಂಕು ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದ್ರ ಹಿಂದೆ ಏನಾದ್ರೂ ಷಡ್ಯಂತ್ರ ಇದ್ಯಾ ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿವೆ. ಹೀಗಾಗಿ ಈ ವಿಚಾರವನ್ನು ತನಿಖೆ ನಡೆಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್​​​ಗೆ ನೀಡಿದೆ.

-masthmagaa.com

Contact Us for Advertisement

Leave a Reply