‘ಕೋವಾಕ್ಸಿನ್​’ ಲಸಿಕೆ ಸೇಫ್​: ಭಾರತದ ಲಸಿಕೆಗೆ ಜೈ ಎಂದ ಲ್ಯಾನ್ಸೆಟ್​ ಜರ್ನಲ್

masthmagaa.com:

ಭಾರತದ ಮೊದಲ ಸ್ವದೇಶಿ ಕೊರೋನಾ ಲಸಿಕೆಯಾದ ‘ಕೋವಾಕ್ಸಿನ್’ ಸುರಕ್ಷತೆ ಬಗ್ಗೆ ನಾನಾ ರೀತಿಯ ಚರ್ಚೆ ನಡೀತಿರುವಾಗಲೇ ಪ್ರತಿಷ್ಠಿತ ಲ್ಯಾನ್ಸೆಟ್ ಜರ್ನಲ್​ ಕೋವಾಕ್ಸಿನ್ ಸಲಿಕೆ ಸೇಫ್ ಅಂತ ಹೇಳಿದೆ. ಈ ಲಸಿಕೆಯ ಮೊದಲ ಹಂತದ ಮಾನವ ಪ್ರಯೋಗದ ವೇಳೆ ಇದು ಸುರಕ್ಷಿತ ಮತ್ತು ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ ಅಂತ ಲ್ಯಾನ್ಸೆಟ್​ ಜರ್ನಲ್ ವರದಿ ಪ್ರಕಟ ಮಾಡಿದೆ. ಅಲ್ಲದೆ ಎಲ್ಲಾ ಏಜ್​ ಗ್ರೂಪ್​ನವರಿಗೂ ಈ ಲಸಿಕೆ ಸೇಫ್​, ಗಂಭೀರ ಪ್ರಮಾಣದ ಅಡ್ಡ ಪರಿಣಾಮ ಇಲ್ಲ ಅಂತಾನೂ ವರದಿಯಲ್ಲಿ ಹೇಳಿದೆ. ಈ ಮೂಲಕ ಲ್ಯಾನ್ಸೆಟ್​​ ಜರ್ನಲ್​ನಲ್ಲಿ ಅಂಕಿ ಅಂಶ ಪ್ರಕಟವಾದ ಭಾರತದ ಮೊದಲ ಕೊರೋನಾ ಲಸಿಕೆ ಅನ್ನೋ ಕೀರ್ತಿಗೆ ಪಾತ್ರವಾಗಿದೆ ಕೋವಾಕ್ಸಿನ್​. ಜೊತೆಗೆ ಟಿ-ಸೆಲ್ ಪ್ರತಿಕ್ರಿಯೆಯನ್ನ ಪ್ರಚೋದಿಸುವ ಮೊದಲ ನಿಷ್ಕ್ರಿಯ (Inactivated) ಕೊರೋನಾ ಲಸಿಕೆ ಕೂಡ ಹೌದು. ಈ ಲಸಿಕೆಯನ್ನ ಹೈದ್ರಾಬಾದ್​ ಮೂಲದ ಭಾರತ್ ಬಯೋಟೆಕ್ ಕಂಪನಿಯು ಐಸಿಎಂಆರ್ ಮತ್ತು ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿ ಜೊತೆ ಸೇರಿಕೊಂಡು ಅಭಿವೃದ್ಧಿಪಡಿಸಿದೆ. ಅಂದ್ಹಾಗೆ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ಕೊಟ್ಟಾಗ ಲಸಿಕೆ ಕುರಿತು ಯಾವುದೇ ಅಂಕಿ ಅಂಶ ಪಬ್ಲಿಕ್ ಡೊಮೈನ್​ನಲ್ಲಿ ಇರಲಿಲ್ಲ. ಅಂದ್ರೆ ಸಾರ್ವಜನಕಿವಾಗಿ ಅಂಕಿ ಅಂಶ ಪ್ರಕಟವಾಗಿರಲಿಲ್ಲ. ಹೀಗಾಗಿ ಲಸಿಕೆ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ವಿಪಕ್ಷಗಳ ಕೋಪಕ್ಕೆ ಕಾರಣವಾಗಿತ್ತು. ಇದೀಗ ಪ್ರತಿಷ್ಠಿತ ಲ್ಯಾನ್ಸೆಟ್​ ಜರ್ನಲ್ಲೇ ಕೋವಾಕ್ಸಿನ್ ಲಸಿಕೆ ಸೇಫ್ ಅಂತ ಹೇಳಿರೋದು ಲಸಿಕೆ ಬಗ್ಗೆಗಿನ ಅನುಮಾನ, ಭಯವನ್ನ ದೂರ ಮಾಡಿದೆ.

-masthmagaa.com

Contact Us for Advertisement

Leave a Reply