masthmagaa.com:

ಪೂರ್ವ ಲಡಾಖ್​ನ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಭಾರತ-ಚೀನಾ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ನಡೆದು ಪರಿಸ್ಥಿತಿ ಗಂಭೀರವಾಗಿದೆ. ಆದ್ರೆ ದೂರದ ಅರುಣಾಚಲ ಪ್ರದೇಶದ ಎಲ್​ಎಸಿ ಬಳಿ ಇದಕ್ಕೆ ತದ್ವಿರುದ್ಧವಾಗಿರುವ ಘಟನೆಯೊಂದು ನಡೆದಿದೆ.

ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಪ್ರದೇಶದಲ್ಲಿ ಆಗಸ್ಟ್ 31ರಂದು ಚೀನಾದಿಂದ 13 ಯಾಕ್​ ಮತ್ತು ಅದರ ಕರುಗಳು ಎಲ್​ಎಸಿ ದಾಟಿ ಭಾರತಕ್ಕೆ ಬಂದಿದ್ದವು. ಅಂದಿನಿಂದ ಸೆಪ್ಟೆಂಬರ್ 7ರವರೆಗೆ ಅವುಗಳು ಭಾರತದ ನೆಲದಲ್ಲೇ ಇದ್ದವು.

ಇದನ್ನ ಮನಗಂಡ ಭಾರತೀಯ ಸೇನೆ ಆ 13 ಯಾಕ್ ಮತ್ತು ಅದರ ಕರುಗಳನ್ನು ಚೀನಾಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದೆ. ಇದಕ್ಕೆ ಚೀನಾ ಸೇನಾಧಿಕಾರಿಗಳು ಧನ್ಯವಾದ ಕೂಡ ಸೂಚಿಸಿದ್ದಾರೆ ಅಂತ ಭಾರತೀಯ ಸೇನೆ ಹೇಳಿದೆ.

-masthmagaa.com

Contact Us for Advertisement

Leave a Reply