ಪಂಜಾಬ್‌ ಚಂಡೀಗಢದಲ್ಲಿ APP ʻಸ್ವತಂತ್ರʼ ಹೋರಾಟ: ಕೇಜ್ರಿವಾಲ್

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಹಾಗೂ I.N.D.I ಮೈತ್ರಿಕೂಟಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ಆಮ್‌ ಆದ್ಮಿ ಪಾರ್ಟಿ ಪಂಜಾಬ್‌ ಹಾಗೂ ಚಂಡೀಗಢದಿಂದ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೆ ಅಂತ ದೆಹಲಿ ಸಿಎಂ ಕೇಜ್ರಿವಾಲ್‌ ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಬೆಂಗಾಲ್‌ ಸಿಎಂ ಮಮತಾ ಬ್ಯಾನರ್ಜಿ ಮೈತ್ರಿ ಕೂಟದ ಕೈ ಬಿಟ್ಟು, TMC ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೆ ಅಂದಿದ್ರು. ಇದೀಗ ಆಪ್‌ ಕೂಡ ಪಂಜಾಬ್‌, ಚಂಡೀಗಢದ ಎಲ್ಲಾ 14 ಲೋಕ ಸಭೆ ಸೀಟ್‌ಗಳಲ್ಲಿ ಒಬ್ಬಂಟಿಯಾಗಿ ಫೈಟ್‌ ಮಾಡಲಿದೆ. ಅಲ್ಲದೆ ಕೆಲವೇ ದಿನಗಳಲ್ಲಿ ಕ್ಯಾಂಡಿಡೇಟ್‌ಗಳನ್ನ ಅನೌನ್ಸ್‌ ಮಾಡ್ತೀವಿ ಅಂತ ಕೇಜ್ರಿವಾಲ್‌ ಹೇಳಿದ್ದಾರೆ. ಆದ್ರೆ I.N.D.I ಮೈತ್ರಿ ಕೂಟಕ್ಕೆ ನಮ್ಮ ಸಪೋರ್ಟ್‌ ಇದ್ದೇ ಇರುತ್ತೆ. ಸೀಟು ಹಂಚಿಕೆ ವಿಚಾರವಾಗೂ ನಾವು ಬಹಳಷ್ಟು ಮಾತನಾಡಿದ್ದೇವೆ. ಸೀಟು ಸಂಧಾನ ಪ್ರಕ್ರಿಯೆಯನ್ನ ಬೇಗ ಮುಗಿಸಿ ಅಂತ ನಾವು ಒಕ್ಕೂಟವನ್ನ ಕೇಳಿದ್ವಿ ಅಂತ ಕೇಜ್ರಿವಾಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply