masthmagaa.com:

ಸಿಡ್ನಿ: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬರೋಬ್ಬರಿ 375 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ನಾಯಕ ಫಿಂಚ್ ಮತ್ತು ಡೇವಿಡ್​ ವಾರ್ನರ್ ಶತಕದ ಜೊತೆಯಾಟ ನೀಡಿದ್ರು. ಬಳಿಕ ಬಂದ ಸ್ಟೀವ್ ಸ್ಮಿತ್, ಮ್ಯಾಕ್ಸ್​ವೆಲ್​ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. ಫಿಂಚ್ – 114, ಸ್ಮಿತ್ – 105, ವಾರ್ನರ್ – 69,  ಮ್ಯಾಕ್ಸ್​ವೆಲ್ – 45 ರನ್ ಚಚ್ಚಿ ಮಿಂಚಿದ್ರು. ನಿಗದಿತ 50 ಓವರ್​ಗಳಲ್ಲಿ ಆಸ್ಟ್ರೇಲಿಯಾ 6 ವಿಕೆಟ್​ ಕಳೆದುಕೊಂಡು 374 ರನ್ ಕಲೆ ಹಾಕ್ತು. ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್​ ಪಡೆದ್ರೆ, ಬೂಮ್ರ, ಸೈನಿ ಮತ್ತು ಚಹಲ್ ತಲಾ ಒಂದೊಂದು ವಿಕೆಟ್ ಪಡೆದ್ರು.

-masthmagaa.com

Contact Us for Advertisement

Leave a Reply