6 ಕೇಸ್​ ವರದಿಯಾದ್ರೂ ಈ ನಗರದಲ್ಲಿ ಲಾಕ್​ಡೌನ್​ ಘೋಷಣೆ

masthmagaa.com:

ನಮ್ಮ ರಾಜ್ಯದಲ್ಲಿ ಕೊರೋನಾ ಕೇಸಸ್​ 15 ಸಾವಿರಕ್ಕೆ ಇಳಿಕೆಯಾಗ್ತಿದ್ದಂತೆ ಲಾಕ್​ಡೌನ್ ತೆರವು ಮಾಡ್ಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಆದ್ರೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಮೆಲ್ಬೊರ್ನ್​ನಲ್ಲಿ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆ ನಡೆದಿದೆ. ಇಡೀ ರಾಜ್ಯದಲ್ಲಿ 24 ಗಂಟೆಯಲ್ಲಿ ವರದಿಯಾಗಿರೋದು ಕೇವಲ 6 ಕೊರೋನಾ ಕೇಸ್​. ಹೀಗಿದ್ರೂ ಮೆಲ್ಬೊರ್ನ್​​ನಲ್ಲಿ ಕಳೆದ ಒಂದು ವಾರದಿಂದ ಜಾರಿಯಲ್ಲಿದ್ದ ಲಾಕ್​ಡೌನ್​ ಅನ್ನ ಮತ್ತೆ ಒಂದುವಾರ ವಿಸ್ತರಿಸಲಾಗಿದೆ. ಮೆಲ್ಬೊರ್ನ್​ನಲ್ಲಿ ಕಳೆದ ಕೆಲ ದಿನಗಳಿಂದ ಭಾರತದ ರೂಪಾಂತರಿ ವೈರಾಣುವಿನ ಕೇಸಸ್​ ವರದಿಯಾಗ್ತಿದೆ. ಹೀಗಾಗಿ ಲಾಕ್​ಡೌನ್ ವಿಸ್ತರಿಸದಿದ್ರೆ ಪರಿಸ್ಥಿತಿ ಕೈಮೀರುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಬೇರೆ ತಳಿಯ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಪಾಸ್ ಆಗಲು ಐದರಿಂದ ಆರು ತಗೊಳ್ತಿತ್ತು. ಆದ್ರೆ ಭಾರತದ ರೂಪಾಂತರಿ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದ​ ಒಂದೇ ದಿನದಲ್ಲಿ ಹರಡುತ್ತಿದೆ ಅಂತಾನೂ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply