ಹೀಗೆ ನಡೆದಿತ್ತು ಏರ್ ಸ್ಟ್ರೈಕ್…ವಾಯುಸೇನೆಯಿಂದ ವಿಡಿಯೋ ರಿಲೀಸ್..!

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್‍ನಲ್ಲಿ ಏರ್ ಸ್ಟ್ರೈಕ್ ನಡೆಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈ ಸ್ಟ್ರೈಕ್‍ನಲ್ಲಿ ವಾಯುಪಡೆ ಬಾಲಾಕೋಟ್‍ನಲ್ಲಿದ್ದ ಜೈಷ್ ಉಗ್ರರ ನೆಲೆಗಳ ಮೇಲೆ ಬಾಂಬ್ ಮಳೆ ಸುರಿಸಿದ್ರು. ಈ ಘಟನೆಯ ಕುರಿತು ವಾಯುಸೇನೆ ಶುಕ್ರವಾರ ಒಂದು ವಿಡಿಯೋ ರಿಲೀಸ್ ಮಾಡಿದೆ. ಅದರಲ್ಲಿ ಏರ್ ಸ್ಟ್ರೈಕ್ ಹೇಗೆ ಮಾಡಲಾಯ್ತು ಎಂಬ ಬಗ್ಗೆ ಫುಲ್ ಮಾಹಿತಿ ಇದೆ.

ಪುಲ್ವಾಮಾ ದಾಳಿ ಬಳಿಕ ದೇಶದಲ್ಲಿ ಯಾವ ರೀತಿ ಸಿಟ್ಟು ಇತ್ತು. ನಂತರ ವಾಯುಸೇನೆ ಬಾಲಾಕೋಟ್ ಏರ್ ಸ್ಟ್ರೈಕ್ ಯೋಜನೆ ರೂಪಿಸಿದ್ದು, ನಂತರ ವಾಯುಸೇನೆಯ ವಿಮಾನಗಳು ಪಾಕ್ ವಾಯುಗಡಿಗೆ ನುಗ್ಗಿ ಬಾಂಬ್ ಮಳೆ ಸುರಿಸಿದ್ದು ಎಲ್ಲವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ.

Contact Us for Advertisement

Leave a Reply