ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ: ಕೊಹ್ಲಿಗೆ ಪಿತೃತ್ವ ರಜೆ ನೀಡಿದ ಬಿಸಿಸಿಐ

masthmagaa.com:

ಯುಎಇನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್​ ಮುಗಿದ ಕೂಡಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆದ್ರೆ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಕೆಲ ಆಟಗಾರರು ಐಪಿಎಲ್​ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲು ಆಲ್ ಇಂಡಿಯಾ ಸೀನಿಯರ್ ಸೆಲೆಕ್ಷನ್​ ಕಮಿಟಿ ಭಾನುವಾರ ಸಭೆ ಸೇರಿತ್ತು. ಈ ವೇಳೆ ಆಯ್ಕೆ ಸಮಿತಿಯು ವಿರಾಟ್​ ಕೊಹ್ಲಿಗೆ ಪಿತೃತ್ವ ರಜೆಯನ್ನು ನೀಡಿದೆ. ಮೊದಲ ಟೆಸ್ಟ್ ಬಳಿಕ ವಿರಾಟ್​ ಕೊಹ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಒಟ್ಟು 3 ಒಂಡೇ, 3 ಟಿ-20 ಮತ್ತು 4 ಟೆಸ್ಟ್ ಪಂದ್ಯಗಳು ನಡೆಯಲಿವೆ.

ಮತ್ತೊಂದುಕಡೆ ಗಾಯಗೊಂಡು ಆಸ್ಟ್ರೇಲಿಯಾ ಪ್ರವಾಸಕ್ಕೆ ಅನುಮಾನ ಎನ್ನಲಾಗ್ತಿದ್ದ ರೋಹಿತ್ ಶರ್ಮಾ ಅವರನ್ನ ಟೆಸ್ಟ್ ತಂಡಕ್ಕೆ ಸೇರಿಸಲಾಗಿದೆ. ಆದ್ರೆ ಏಕದಿನ ಮತ್ತು ಟಿ-20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಇನ್ನು ವೇಗಿ ಇಶಾಂತ್ ಶರ್ಮಾ ಗಾಯದಿಂದ ಸಂಪೂರ್ಣವಾಗಿ ಗುಣಮುಖವಾದ ಬಳಿಕವಷ್ಟೇ ಅವರನ್ನ ಟೆಸ್ಟ್ ತಂಡಕ್ಕೆ ಸೇರಿಸಲಾಗುತ್ತದೆ. ಭುಜದ ನೋವಿನಿಂದ ಬಳಲುತ್ತಿರುವ ವರುಣ್ ಚಕ್ರವರ್ತಿಯನ್ನು ಟಿ-20 ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಟಿ. ನಟರಾಜನ್​ ಅವರನ್ನ ಆಯ್ಕೆ ಮಾಡಲಾಗಿದೆ. ವಿಕೆಟ್​ ಕೀಪರ್ ವೃದ್ಧಿಮಾನ್ ಸಹಾ ಐಪಿಎಲ್ ವೇಳೆ ಗಾಯಗೊಂಡಿದ್ದಾರೆ. ಅವರ ಲಭ್ಯತೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಕಮಲೇಶ್​ ನಾಗರಕೋಟಿ ಕೂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲ್ಲ ಅಂತ ಬಿಸಿಸಿಐ ತಿಳಿಸಿದೆ.

ಏಕದಿನ ತಂಡ: ವಿರಾಟ್​ ಕೊಹ್ಲಿ (ನಾಯಕ), ಶಿಖರ್ ಧವನ್, ಶುಬ್​ಮನ್ ಗಿಲ್, ಕೆ.ಎಲ್​. ರಾಹುಲ್ (ಉಪನಾಯಕ ಮತ್ತು ವಿಕೆಟ್​ ಕೀಪರ್), ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜ, ಯಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕುರ್.

ಟಿ-20 ತಂಡ: ವಿರಾಟ್​ ಕೊಹ್ಲಿ, ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆ.ಎಲ್​. ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್​, ರವೀಂದ್ರ ಜಡೇಜ, ಯಜ್ವೇಂದ್ರ ಚಹಲ್, ವಾಷಿಂಗ್ಟನ್​ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ಟಿ. ನಟರಾಜನ್.

ಟೆಸ್ಟ್ ತಂಡ: ವಿರಾಟ್​ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಕೆ.ಎಲ್​. ರಾಹುಲ್, ಪೃಥ್ವಿ ಶಾ, ಚೇತೇಶ್ವರ ಪುಜಾರಾ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ಶುಬ್​ಮನ್ ಗಿಲ್, ವೃದ್ದಿಮಾನ್ ಸಹ (ವಿಕೆಟ್​ ಕೀಪರ್), ರಿಷಬ್ ಪಂತ್ (ವಿಕೆಟ್​ ಕೀಪರ್), ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಉಮೇಶ್ ಯಾದವ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್.

-masthmagaa.com

Contact Us for Advertisement

Leave a Reply