ಬೈಡೆನ್, ಪುಟಿನ್ ಭೇಟಿ..! ಸಕ್ಸಸ್ಸಾ.. ಫೇಲಾ..?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಿನೇವಾದಲ್ಲಿ ಭೇಟಿಯಾಗಿ 3 ಗಂಟೆಗಳ ಕಾಲ ಚರ್ಚಿಸಿದ್ದಾರೆ. ಅದ್ರಲ್ಲೂ 2 ಗಂಟೆ ಗುಪ್ತಸಭೆ ನಡೆಸಿದ್ದು, ಈ ವೇಳೆ ರಷ್ಯಾ ವಿದೇಶಾಂಗ ಸಚಿವ ಮತ್ತು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮಾತ್ರ ಇದ್ರು. ಈ ಭೇಟಿಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಒಂದ್ರೀತಿಯ ಹಗ್ಗಜಗ್ಗಾಟ ನಡೀತು ಅಂತಲೇ ಹೇಳಬಹುದು.. ಯಾಕಂದ್ರೆ ಅಮೆರಿಕ ಪುಟಿನ್ ವಿರೋಧಿ ನಾಯಕಿ ಅಲೆಕ್ಸಿ ನಾವಲ್ನಿ ವಿಚಾರ ಪ್ರಸ್ತಾಪಿಸಿದ್ರೆ, ಪುಟಿನ್ ಅಮೆರಿಕದಲ್ಲಿನ ಕಪ್ಪು ವರ್ಣೀಯರ ಮೇಲಿನ ಹಿಂಸಾಚಾರದ ಬಗ್ಗೆ ದನಿ ಎತ್ತಿದ್ದಾರೆ. ಬೈಡೆನ್​​ ರಷ್ಯಾದಲ್ಲಿ ಅಮೆರಿಕ ಪ್ರಜೆಗಳಿಬ್ಬರ ಬಂಧನದ ವಿಚಾರ ಪ್ರಸ್ತಾಪಿಸಿದ್ರೆ, ಪುಟಿನ್ ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ ಸಂಬಂಧ ಅಮೆರಿಕದಲ್ಲಿ ಮಾಡಲಾಗಿರೋ ಬಂಧನಗಳ ಬಗ್ಗೆ ಪುಟಿನ್ ಪ್ರಶ್ನಿಸಿದ್ದಾರೆ. ಆದ್ರೂ ಯುದ್ಧ ಕೈದಿಗಳ ಹಸ್ತಾಂತರದ ವಿಚಾರವಾಗಿ ಪಾಸಿಟಿವ್ ಚರ್ಚೆ ನಡೆದಿದ್ದು, ಈ ಸಂಬಂಧ ಒಪ್ಪಂದವಾಗೋ ಸಾಧ್ಯತೆ ಇದೆ. ಈ ಬಗ್ಗೆ ಅಮೆರಿಕ ಸ್ಟೇಟ್​ ಡಿಪಾರ್ಟ್​​ಮೆಂಟ್ ಮತ್ತು ರಷ್ಯಾ ವಿದೇಶಾಂಗ ಇಲಾಖೆ ಮುಂದಿನ ಹೆಜ್ಜೆ ಇಡಲಿದೆ. ಅದೇ ರೀತಿ ಉಭಯದೇಶಗಳ ಸಂಬಂಧ ಹದಗೆಡುತ್ತಿದ್ದಂತೆ ಈ ವರ್ಷದ ಆರಂಭದಲ್ಲಿ ಎರಡೂ ದೇಶಗಳು ತಮ್ಮ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದ್ರು. ಈಗ ಪುನಃ ರಾಯಭಾರಿಗಳ ನೇಮಕಕ್ಕೆ ಉಭಯ ನಾಯಕರು ಸಮ್ಮತಿ ನೀಡಿದ್ದಾರೆ. ಇನ್ನು ಆರ್ಕ್ಟಿಕ್ಟ್​ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಉಪಸ್ಥಿತಿ ಏನೂ ಹೊಸತಲ್ಲ.. ಬಗ್ಗೆ ಅಮೆರಿಕ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾವು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿಲ್ಲ ಅಂತ ಪುಟಿನ್ ಹೇಳಿದ್ದಾರೆ. ಆದ್ರೂ ಕೊನೆಯದಾಗಿ ಮಾತನಾಡಿದ ಬೈಡೆನ್​​, ಪುಟಿನ್​​​ಗೆ ಹೊಸ ಕೋಲ್ಡ್​​ ವಾರ್ ಬೇಕಾಗಿಲ್ಲ ಅಂತ ಕೂಡ ಹೇಳಿದ್ದಾರೆ. ಒಟ್ನಲ್ಲಿ ಒಂದಷ್ಟು ವಿಚಾರಗಳಲ್ಲಿ ಇಬ್ಬರ ನಡುವೆ ಮಾತುಕತೆ ಸಕ್ಸಸ್ ಆದ್ರೂ, ಫುಲ್ ಸರಿಯಾಗುತ್ತೆ.. ಎಲ್ಲವೂ ಸುಧಾರಿಸುತ್ತೆ ಅನ್ನೋದು ಪಕ್ಕ ಹೇಳಕ್ಕಾಗಲ್ಲ.

-masthmagaa.com

Contact Us for Advertisement

Leave a Reply