ಬಿಹಾರದಲ್ಲಿ ಇಂಡಿಯಾ ಕೂಟದ ಮೈತ್ರಿ: 26 ಕ್ಷೇತ್ರದಲ್ಲಿ RJD ಸ್ಪರ್ಧೆ!

masthmagaa.com:

ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ INDI ಒಕ್ಕೂಟದ ಪಕ್ಷಗಳು ತಮ್ಮ ಸೀಟು ಹಂಚಿಕೆ ಪ್ರಕ್ರಿಯೆಯನ್ನ ಅಂತಿಮಗೊಳಿಸಿವೆ. ಒಟ್ಟು 40 ಲೋಕಸಭಾ ಸ್ಥಾನಗಳಿರೋ ಬಿಹಾರದ 26 ಸ್ಥಾನಗಳಲ್ಲಿ ಲಾಲು ಪ್ರಸಾದ್‌ ಯಾದವ್‌ರ RJD ಪಕ್ಷ ಸ್ಫರ್ಧೆ ಮಾಡೋದು ಫಿಕ್ಸ್‌ ಆಗಿದೆ. ಇನ್ನು 9 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಇನ್ನುಳಿದ 5 ಕಡೆ ಎಡ ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಅಂತ ಮಾಹಿತಿ ಲಭ್ಯ ಆಗಿದೆ. ಅಂದ್ಹಾಗೆ ಬಿಹಾರದಲ್ಲಿ ಏಪ್ರಿಲ್‌ 19ರಿಂದ ಜೂನ್‌ 1ರವರೆಗೆ 7 ಹಂತಗಳಲ್ಲೂ ಮತದಾನ ನಡೆಯಲಿದೆ. ಜೂನ್‌ 4ಕ್ಕೆ ರಿಸಲ್ಟ್‌ ಅನೌನ್ಸ್ ಆಗಲಿದೆ. ಇನ್ನು ಲೋಕಸಭೆ ಚುನಾವಣೆ ಅನೌನ್ಸ್‌ ಆದಾಗಿನಿಂದ ಇಲ್ಲಿವರೆಗೆ ಸಿ-ವಿಜಿಲ್‌ ಆ್ಯಪ್ ಮೂಲಕ 79 ಸಾವಿರಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆ ದೂರುಗಳು ದಾಖಲಾಗಿವೆ ಅಂತ ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಅದ್ರಲ್ಲಿ 90% ದೂರುಗಳನ್ನ ಬಗೆಹರಿಸಲಾಗಿದ್ದು, ಅಕ್ರಮ ಬ್ಯಾನರ್‌ಗಳ ವಿರುದ್ದ 58ವರೆ ಸಾವಿರ ದೂರುಗಳು ಬಂದಿವೆ ಅಂತ ಆಯೋಗ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply