ಮೃತದೇಹಗಳ ಪಕ್ಕದಲ್ಲೇ ಚಿಕಿತ್ಸೆ.. ಮತ್ತೊಂದು ವಿಡಿಯೋ ವೈರಲ್..!

masthmagaa.com:

ದೇಶದಲ್ಲಿ 67 ಸಾವಿರ ಜನರಿಗೆ ಕೊರೋನಾ ಹರಡಿದ್ದು, ಮಹಾರಾಷ್ಟ್ರ ಒಂದರಲ್ಲೇ 22 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಕಾಯಿಲೆಯ ಆರ್ಭಟಕ್ಕೆ ಮಹಾರಾಷ್ಟ್ರ ನಲುಗಿ ಹೋಗಿದ್ದು, ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿವೆ. ಇದರ ನಡುವೆ ಕೊರೋನಾ ಆಸ್ಪತ್ರೆಗಳ ಅವ್ಯವಸ್ಥೆ ಕುರಿತ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದನ್ನ ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂಬೈನ ಕೆಇಎಂ ಆಸ್ಪತ್ರೆಯ ಈ ವಿಡಿಯೋದಲ್ಲಿ ಮೃತದೇಹಗಳನ್ನ ನೀಲಿ ಬಣ್ಣದ ಪ್ಲಾಸ್ಟಿಕ್​ನಲ್ಲಿ ಸುತ್ತಿಡಲಾಗಿದೆ. ಅದರ ಪಕ್ಕದಲ್ಲೇ ಇತರ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಅವರ ಸಂಬಂಧಿಕರು ಅತ್ತಿಂದತ್ತ ಇತ್ತಿಂದತ್ತ ಓಡಾಡುತ್ತಿದ್ದಾರೆ.

ಇಂತಹ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುವ ದಯನೀಯ ಪರಿಸ್ಥಿತಿ ಬಂದೊದಗಿದೆ ಅಂತ ನಿತೇಶ್ ರಾಣೆ ಕಿಡಿಕಾರಿದ್ದಾರೆ. ಇತ್ತೀಚೆಗಷ್ಟೇ ನಿತೇಶ್​ ರಾಣೆ ಇಂಥಹದ್ದೇ ಮತ್ತೊಂದು ಆಸ್ಪತ್ರೆಯ ವಿಡಿಯೋವನ್ನು ಶೇರ್ ಮಾಡಿದ್ದರು. ಇಟಲಿಯಲ್ಲಿ ಕಾಯಿಲೆಯ ಆರ್ಭಟ ಹೆಚ್ಚಿದ್ದಾಗ ಇಂತಹ ವಿಡಿಯೋಗಳು ಸಾಕಷ್ಟು ಹರಿದಾಡಿತ್ತು. ಈಗ ಭಾರತದ ವಿಡಿಯೋಗಳು ವೈರಲ್ ಆಗ್ತಿವೆ.

-masthmagaa.com

Contact Us for Advertisement

Leave a Reply