ಜಾರ್ಖಂಡ್​​​ ವಿಧಾನಸಭೆಯಲ್ಲಿ ಕೇಸರಿ ಕಹಳೆ ಮೊಳಗಿಸಿದ ಬಿಜೆಪಿ! ಯಾಕೆ ಗೊತ್ತಾ?

masthmagaa.com:

ಜಾರ್ಖಂಡ್​ ವಿಧಾನಸಭೆಯಲ್ಲಿ ಪ್ರತ್ಯೇಕ ನಮಾಜ್ ರೂಂ ನಿರ್ಮಿಸಿರೋದು ಈಗ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರು ಇವತ್ತು ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್​​ ಎಂದು ಘೋಷಣೆ ಕೂಗುತ್ತಾ, ಹನುಮಾನ್ ಚಾಲಿಸಾ ಪಠಿಸುತ್ತಾ ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದಾರೆ. ಕಲಾಪ ನಡೆಯಲು ಬಿಡಲೇ ಇಲ್ಲ. ಕೆಲ ಶಾಸಕರು ಸದನದಲ್ಲಿ 30 ನಿಮಿಷ ಹನುಮಾನ್ ಚಾಲಿಸಾ ಪಠಿಸಲು ಅವಕಾಶ ನೀಡಬೇಕು ಅಂತ ಬೇಡಿಕೆ ಇಟ್ರು. ಇದೇ ವೇಳೆ ಶಾಸಕ ನಾರಾಯಣ್ ದಾಸ್ ಅಂತೂ ಮೈಮೇಲೆಲ್ಲ ಎಲೆಯ ಹಾರ ಹಾಕಿಕೊಂಡು, ಹಣೆ ತುಂಬಾ ನಾಮ ಬಳಿದುಕೊಂಡು, ಕೈಯಲ್ಲಿ ಡಮರು ಬಾರಿಸುತ್ತಾ ಆರ್ಭಟಿಸುತ್ತಾ ಅಧಿವೇಶನ ಪ್ರವೇಶ ಮಾಡಲು ಮುಂದಾದ್ರು. ಈಗ ನಿಮ್ದೇನು ಬೇಡಿಕೆ ಅಂತ ಕೇಳಿದ್ರೆ, ತನ್ನ ಕ್ಷೇತ್ರದಲ್ಲಿ ಬಂದ್ ಆಗಿರೋ ಬಾಬಾ ಬೈದ್ಯನಾಥ್ ಧಾಮ್ ದೇಗುಲ ಓಪನ್ ಮಾಡಬೇಕು ಅಂತ ಆಗ್ರಹಿಸಿ ಹೀಗೆ ಪ್ರತಿಭಟನೆ ಮಾಡ್ತಿದೀನಿ ಅಂದ್ರು. ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ರಬೀಂದ್ರ ನಾಥ್ ಮಹ್ತೋ, ನನಗೆ ಬೇಕಾದ್ರೆ ಹೊಡೆಯಿರಿ. ಆದ್ರೆ ಈ ಸ್ಥಾನಕ್ಕೆ ಅವಮಾನ ಮಾಡ್ಬೇಡಿ. ಹೋಗಿ ಕೂತ್ಕೊಳ್ಳಿ.. ಹನುಮಾನ್ ಚಾಲಿಸಾವನ್ನು ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಬೇಡಿ.. ಆ ಭಜರಂಗಬಲಿಯಾದ್ರೂ ನಿಮಗೆಲ್ಲಾ ಬುದ್ಧಿ ನೀಡಲಿ ಅಂತ ಹೇಳಿದ್ರು. ಅಂದಹಾಗೆ ಜಾರ್ಖಂಡ್​​ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಅಧಿಕಾರ ಇದೆ.

-masthmagaa.com

Contact Us for Advertisement

Leave a Reply