ಮೆಟ್ರೋದಲ್ಲಿ ಬಾಲಿವುಡ್‌ ನಟಿ ಹೇಮಾ ಮಾಲಿನಿ

masthmagaa.com:

ಬಾಲಿವುಡ್‌ ನಟಿ-ರಾಜಕಾರಣಿ ಹೇಮಾ ಮಾಲಿನಿ ಇತ್ತೀಚೆಗೆ ಮುಂಬೈನಲ್ಲಿ ಮೆಟ್ರೋದಲ್ಲಿ ಮತ್ತು ನಂತರ ಆಟೋದಲ್ಲಿ ಪ್ರಯಾಣಿಸಿದರು. ಟ್ವಿಟರ್‌ನಲ್ಲಿ, ಹೇಮಾ ತಮ್ಮ ಪ್ರಯಾಣದ ಕುರಿತು ಹೇಳುವ ಪೋಸ್ಟ್‌ಗಳನ್ನ ಹಂಚಿಕೊಂಡಿದ್ದಾರೆ. ಅಲ್ಲದೇ ಹಲವಾರು ಫೋಟೊಗಳು ಮತ್ತು ವೀಡಿಯೊಗಳನ್ನೂ ಸಹ ಪೋಸ್ಟ್ ಮಾಡಿದ್ದಾರೆ. ಮುಂಬೈನ ಉಪನಗರವಾದ ದಹಿಸರ್‌ಗೆ ಕಾರಿನಲ್ಲಿ ತಲುಪಲು ಎರಡು ಗಂಟೆ ಬೇಕಾಯಿತು ಎಂದು ಹೇಮಾ ಹೇಳಿದರು. ಆದ್ದರಿಂದ, ಅವಳು ನಂತರ ಮೆಟ್ರೋದಲ್ಲಿ ಹೋಗೊಕೆ ನಿರ್ಧರಿಸಿದರಂತೆ. ಇದರ ಬಗ್ಗೆ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೊದಲ ಪೋಸ್ಟ್‌ನಲ್ಲಿ, ಹೇಮಾ ಅವರು ಮೆಟ್ರೋ ನಿಲ್ದಾಣದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ, ಮೆಟ್ರೋ ನಿಲ್ದಾಣದಲ್ಲಿ ತಮ್ಮ ಫ್ಯಾನ್‌ ಜೊತೆ ಕ್ಲಿಕ್ಕಿಸಿದ ಫೋಟೊವನ್ನೂ ಸಹ ಶೇರ್‌ ಮಾಡಿದ್ದಾರೆ. ಇನ್ನೂ ಇವರು ಶೇರ್‌ ಮಾಡಿದ ವಿಡಿಯೋದಲ್ಲಿ ಅಭಿಮಾನಿಗಳು ಇವರ ಜೊತೆ ಫೋಟೊಗೆ ಪೋಸ್‌ ಕೊಟ್ಟಿದು ಮತ್ತು ಒಂದು ಮಗುವಿನ ಜೊತೆ ಇವರ ತುಂಟಾಟಗಳು ಇದೆ.

-masthmagaa.com

Contact Us for Advertisement

Leave a Reply