ಚೆನ್ನೈ ತಂಡದಲ್ಲಿ ಕೊರೋನಾ ಆರ್ಭಟ: ಐಪಿಎಲ್​ನಿಂದ ಔಟ್ ಆಗುತ್ತಾ ಸಿಎಸ್​ಕೆ..?

masthmagaa.com:

ಸೆಪ್ಟೆಂಬರ್​ 19ರಿಂದ ಯುನೈಟೆಡ್​ ಅರಬ್ ಎಮಿರೇಟ್ಸ್​​ನಲ್ಲಿ ನಡೆಯಲಿರುವ ಕಲರ್​ಫುಲ್ ಟೂರ್ನಿ ಐಪಿಎಲ್​ಗೆ ಮತ್ತೆ ವಿಘ್ನ ಎದುರಾಗಿದೆ. ಭಾರತ ಮತ್ತು ಯುಎಇ ಸರ್ಕಾರ ಪಂದ್ಯಾಟಕ್ಕೆ ಅನುಮತಿ ನೀಡಿದ್ರೂ ಈ ಕೊರೋನಾ ಮಾತ್ರ ಬಿಟ್ಟುಬಿಡದೆ ಕಾಡ್ತಿದೆ.

ಇದೀಗ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ವೇಗಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಯಾವ ವೇಗಿ ಅಂತ ಬಹಿರಂಗಪಡಿಸಿಲ್ಲ. ಆದ್ರೆ ಆತ ಭಾರತ ತಂಡದ ಪರವಾಗಿ ಆಡಿದ್ದು, ವೇಗದ ಬೌಲರ್ ಅನ್ನೋದು ಮಾತ್ರ ಗೊತ್ತಾಗಿದೆ. ಭಾರತವನ್ನು ಪ್ರತಿನಿಧಿಸಿರುವ ಇಬ್ಬರು ವೇಗಿಗಳು ಸಿಎಸ್​ಕೆ ತಂಡದಲ್ಲಿದ್ದಾರೆ. ದೀಪಕ್ ಚಹರ್ ಮತ್ತು ಶಾರ್ದೂಲ್ ಠಾಕುರ್.

ಕೇವಲ ಬೌಲರ್ ಮಾತ್ರವಲ್ಲ ಸಿಎಸ್​ಕೆ ತಂಡದ 10 ಮಂದಿ ಸಪೋರ್ಟಿಂಗ್ ಸ್ಟಾಫ್​ಗೂ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಇಡೀ ತಂಡ ನಾಲ್ಕನೇ ಬಾರಿ ಕೊರೋನಾ ಪರೀಕ್ಷೆಗೆ ಒಳಗಾಗಬೇಕಾಯ್ತು ಅಂತ ಮೂಲಗಳು ತಿಳಿಸಿವೆ. ಜೊತೆಗೆ ತಂಡದ ಕ್ವಾರಂಟೈನ್​ ಅವಧಿಯನ್ನು ಸೆಪ್ಟೆಂಬರ್​ 1ರವರೆಗೆ ವಿಸ್ತರಿಸಲಾಗಿದೆ. ಐಪಿಎಲ್​ಗೆ ಅಂತಿಮ ಹಂತದ ತಯಾರಿ ನಡೆಸುತ್ತಿರುವಾಗಲೇ ತಮ್ಮ ತಂಡದ ವೇಗಿಗೆ ಸೋಂಕು ತಗುಲಿರೋದು ಸಿಎಸ್​ಕೆ ಪಾಳಯದಲ್ಲಿ ಆತಂಕ ಮೂಡಿಸಿದೆ. ತಂಡದಲ್ಲಿ ಕೊರೋನಾ ಓಟ ಹೀಗೆ ಮುಂದುವರೆದು ಇನ್ನಷ್ಟು ಮಂದಿಗೆ ಹರಡಿದ್ರೆ ಐಪಿಎಲ್​ನಲ್ಲಿ ಚೆನ್ನೈ ತಂಡ ಭಾಗಿಯಾಗೋದು ಕೂಡ ಅನುಮಾನ ಎನ್ನಲಾಗ್ತಿದೆ.

-masthmagaa

Contact Us for Advertisement

Leave a Reply