masthmagaa.com:

ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 61 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಏಪ್ರಿಲ್​ ಬಳಿಕ ಚೀನಾದಲ್ಲಿ ದೃಢಪಟ್ಟ ಅತಿ ಹೆಚ್ಚು ಪ್ರಕರಣ ಇದಾಗಿದೆ. 61 ಪ್ರಕರಣಗಳಲ್ಲಿ 57 ಪ್ರಕರಣ ಸ್ಥಳೀಯವಾಗಿ ಹರಡಿದ್ದು, 4 ಪ್ರಕರಣ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ತಿಳಿಸಿದೆ.

ಸ್ಥಳೀಯವಾಗಿ ಹರಡಿದ 57 ಪ್ರಕರಣಗಳಲ್ಲಿ 41 ಕೇಸ್​ಗಳು ಸೋಂಕಿನ ಹೊಸ ಹಾಟ್​ಸ್ಪಾಟ್​ ಎನಿಸಿಕೊಂಡಿರುವ ಷಿನ್​ಜಿಯಾಂಗ್ ಉಗರ್ ಸ್ವಾಯತ್ತ ಪ್ರದೇಶದಲ್ಲೇ ವರದಿಯಾಗಿದೆ. ಉಳಿದಂತೆ ಲಿಯೋನಿಂಗ್ ಪ್ರಾಂತ್ಯದಲ್ಲಿ 14 ಮತ್ತು ಜಿಲಿನ್ ಪ್ರಾಂತ್ಯದಲ್ಲಿ 2 ಪ್ರಕರಣ ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಚೀನಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಹೊಸದಾಗಿ 10 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೀನಾದಲ್ಲಿ ಇದುವರೆಗೆ 83,891 ಜನರಿಗೆ ಸೋಂಕು ತಗುಲಿದ್ದು 4,634 ಜನ ಮೃತಪಟ್ಟಿದ್ದಾರೆ. ಸುಮಾರು 79,000 ಸೋಂಕಿತರು ಗುಣಮುಖರಾಗಿದ್ದಾರೆ.

ಆರಂಭದಲ್ಲಿ ತನ್ನ ದೇಶದಲ್ಲೇ ಕೊರೋನಾ ಸೋಂಕು ಸ್ಫೋಟಗೊಂಡರೂ ಅದನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದೆ ಚೀನಾ. ಆದ್ರೆ ನಿನ್ನೆಯ 41  ಮತ್ತು ಇವತ್ತಿನ 61 ಪ್ರಕರಣಗಳನ್ನು ನೋಡಿದ್ರೆ ಮೊದಲ ಅಲೆಯನ್ನು ಎದುರಿಸಿದ್ದ ಚೀನಾದಲ್ಲೀಗ ಎರಡನೇ ಅಲೆ ಏಳುತ್ತಿದೆಯಾ ಅನ್ನೋ ಅನುಮಾನ ಮೂಡಿದೆ.

-masthmagaa.com

Contact Us for Advertisement

Leave a Reply