ಚೀನಾದಲ್ಲಿ ಸದ್ಯ ಎಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಗೊತ್ತಾ..?

masthmagaa.com:

ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಇಡೀ ಜಗತ್ತನ್ನೇ ಅಲ್ಲಾಡಿಸಿದೆ. ಅಮೆರಿಕದಿಂದ ಹಿಡಿದು ಬಹುತೇಕ ದೇಶಗಳು ಕಾಯಿಲೆ ವಿರುದ್ಧ ಹೋರಾಡುತ್ತಿವೆ. ಆದ್ರೆ ಮಹಾಮಾರಿ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಅದರ ಹಾವಳಿ ಕಮ್ಮಿಯಾಗಿದ್ದು ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.

ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 10 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 6 ಜನ ವಿದೇಶದಿಂದ ಬಂದವರಾಗಿದ್ದು, 4 ಜನರಿಗೆ ಸ್ಥಳೀಯವಾಗಿ ಕಾಯಿಲೆ ಹರಡಿದೆ. ಅಲ್ಲದೆ ರೋಗ ಲಕ್ಷಣ ಕಾಣಿಸದ 27 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಅಂತ ಚೀನಾ ಸರ್ಕಾರ ಹೇಳಿದೆ.

ಈ ಮೂಲಕ ಚೀನಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 82,798ಕ್ಕೆ ಏರಿಕೆಯಾಗಿದೆ. ಇದರಲ್ಲಿ 77,207 ಮಂದಿ ಗುಣಮುಖರಾಗಿದ್ದಾರೆ. 4,632 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಚೀನಾದಲ್ಲಿ 959 ಮಂದಿ ಮಾತ್ರ ಕೊರೋನಾ ಪೀಡಿತರಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 63 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಅಂದ್ರೆ ಚೀನಾದಲ್ಲಿ ಆ್ಯಕ್ಟಿವ್ ಕೇಸ್​ಗಳ ಸಂಖ್ಯೆ ಕೇವಲ 1 ಪರ್ಸೆಂಟ್ ಇದೆ.

ಆದರೂ ಚೀನಾ ಕೊಡುವ ಅಂಕಿ ಸಂಖ್ಯೆಗಳ ಬಗ್ಗೆ ಅಮೆರಿಕ ಸೇರಿದಂತೆ ವಿಶ್ವ ಸಮುದಾಯಕ್ಕೆ ಸಾಕಷ್ಟು ಅನುಮಾನ. ಚಿಕಿತ್ಸೆ ಇಲ್ಲದ ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಜಾಗದಲ್ಲಿ ಇದೆಲ್ಲಾ ಸಾಧ್ಯನಾ ಅನ್ನೋ ಪ್ರಶ್ನೆ.

-masthmagaa.com

Contact Us for Advertisement

Leave a Reply