ಕೊರೋನಾದಿಂದ ಸಂಪೂರ್ಣ ಮುಕ್ತವಾಯ್ತು ಚೀನಾದ ವುಹಾನ್..!

masthmagaa.com:

ಇಡೀ ಜಗತ್ತು ಕೊರೋನಾ ವಿರುದ್ಧ ಹೋರಾಡುತ್ತಿದ್ರೆ, ಮಹಾಮಾರಿ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್​ ನಗರ ಕಾಯಿಲೆಯಿಂದ ಮುಕ್ತವಾಗಿದೆ ಅಂತ ಚೀನಾ ಸರ್ಕಾರ ಹೇಳಿದೆ. ಈ ಬಗ್ಗೆ ಮಾತನಾಡಿರೋ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ವಕ್ತಾರ ಮಿ ಫೆಂಗ್,  ವುಹಾನ್​ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಈ ಹೋರಾಟದಲ್ಲಿ ಭಾಗಿಯಾದ ವುಹಾನ್ ಹಾಗೂ ಚೀನಾದ ಎಲ್ಲಾ ವೈದ್ಯರಿಗೂ ಧನ್ಯವಾದ ಅಂತ ಹೇಳಿದ್ದಾರೆ.

ಚೀನಾದ ಹುಬೆ ಪ್ರಾಂತ್ಯದ ವುಹಾನ್ ನಗರದಲ್ಲಿ 2019ರ ಡಿಸೆಂಬರ್​ನಲ್ಲಿ ಮೊದಲ ಪ್ರಕರಣ ದೃಢಪಟ್ಟಿತ್ತು. ಅದಾದ ಬಳಿಕ ವುಹಾನ್​ನಲ್ಲಿ ಒಟ್ಟು 46,452 ಜನರಿಗೆ ಸೋಂಕು ತಗುಲಿತ್ತು. ಇದು ಚೀನಾದಲ್ಲಿ ದೃಢಪಟ್ಟ ಪ್ರಕರಣಗಳ ಶೇ. 56ಕ್ಕೂ ಹೆಚ್ಚು. ಈ ಪೈಕಿ 3,869 ಮಂದಿ ವುಹಾನ್​ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ 84 ಪರ್ಸೆಂಟ್ ಜನ ವುಹಾನ್​ನಲ್ಲೇ ಬಲಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply