ಚೀನಾದಲ್ಲಿ ಮತ್ತೆ 43 ಮಂದಿಗೆ ಸೋಂಕು.. ಷಿನ್​ಜಿಯಾಂಗ್​ನಲ್ಲಿ ಕೊರೋನಾ ಸ್ಫೋಟ

masthmagaa.com:

ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 43 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ತಿಳಿಸಿದೆ. ಇದರಲ್ಲಿ 36 ಪ್ರಕರಣ ಸ್ಥಳೀಯವಾಗಿ ಹರಡಿದ್ದಾಗಿದ್ದು, 7 ಪ್ರಕರಣ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದೆ. ಸೋಂಕು ಸ್ಫೋಟದ ಹೊಸ ಕೇಂದ್ರವಾಗಿರುವ ಷಿನ್​ಜಿಯಾಂಗ್ ಉಗರ್ ಸ್ವಾಯತ್ತ ಪ್ರದೇಶದಲ್ಲಿ 38 ಪ್ರಕರಣ ವರದಿಯಾಗಿದೆ. ಉಳಿದ 8 ಪ್ರಕರಣ ಲಿಯೊನಾಂಗ್ ಪ್ರಾಂತ್ಯದಲ್ಲಿ ದೃಢಪಟ್ಟಿದೆ.

ಷಿನ್​ಜಿಯಾಂಗ್​ ಪ್ರಾಂತ್ಯದ ರಾಜಧಾನಿ ಉರುಂಕಿಯಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದು, ಇಲ್ಲಿಯವರೆಗೆ 590ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕೊರೋನಾ ಹಾವಳಿ ನಿಯಂತ್ರಿಸಲು ಸಾಮೂಹಿಕ ಪರೀಕ್ಷೆ, ವಾಹನ ಸಂಚಾರದ ಮೇಲೆ ನಿರ್ಬಂಧ ಸೇರಿದಂತೆ ಕೆಲವೊಂದು ಏರಿಯಾಗಳನ್ನ ಸಂಪೂರ್ಣ ಬಂದ್ ಮಾಡುವ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಚೀನಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಹೊಸದಾಗಿ 10 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೀನಾ ನೆಲದಲ್ಲಿ ಇದುವರೆಗೆ 84,428 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 4,634 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 79,013 ಸೋಂಕಿತರು ಗುಣಮುಖರಾಗಿದ್ದಾರೆ.

ಚೀನಾದಲ್ಲಿ ಕಳೆದ 9 ದಿನದ ಟ್ರೆಂಡ್:

ಜುಲೈ 26: 41 ಪ್ರಕರಣ

ಜುಲೈ 27: 61 ಪ್ರಕರಣ

ಜುಲೈ 28: 68 ಪ್ರಕರಣ

ಜುಲೈ 29: 101 ಪ್ರಕರಣ

ಜುಲೈ 30: 105 ಪ್ರಕರಣ

ಜುಲೈ 31: 127 ಪ್ರಕರಣ

ಆಗಸ್ಟ್ 1: 45 ಪ್ರಕರಣ

ಆಗಸ್ಟ್ 2: 49 ಪ್ರಕರಣ

ಆಗಸ್ಟ್ 3: 43 ಪ್ರಕರಣ

-masthmagaa.com

Contact Us for Advertisement

Leave a Reply