ಚೀನಾದಲ್ಲಿ ಇದೇ ಮೊದಲ ಬಾರಿ ಹೊಸ ಕೊರೋನಾ ಪ್ರಕರಣ ಇಲ್ಲ..!

masthmagaa.com:

ಕೊರೋನಾ ತವರು ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಪ್ರಕರಣ ದೃಢಪಟ್ಟಿಲ್ಲ ಅಂತ ಚೀನಾದ ನ್ಯಾಷನಲ್​ ಹೆಲ್ತ್​ ಕಮಿಷನ್ ಹೇಳಿದೆ. ಕಾಯಿಲೆ ಕಾಣಿಸಿಕೊಂಡ ನಂತರ ಚೀನಾದಲ್ಲಿ ಒಂದೂ ಪ್ರಕರಣ ದೃಢಪಡದೇ ಇರೋದು ಇದೇ ಮೊದಲು.

ಕಳೆದ ವರ್ಷ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ ನಗರದಲ್ಲಿ ಮೊದಲ ಬಾರಿ ಕೊರೋನಾ ವೈರಸ್  ಕಾಣಿಸಿಕೊಂಡಿತ್ತು. ಅದಾದ ಬಳಿಕ ಚೀನಾದಲ್ಲಿ ಕಾಯಿಲೆ ವೇಗ ಪಡೆದುಕೊಂಡಿತ್ತು. ನಂತರ ಇಟಲಿ ಸೇರಿದಂತೆ ಯುರೋಪಿನ ದೇಶಗಳಲ್ಲಿ ಆರ್ಭಟ ನಡೆಸಿತು. ಸದ್ಯ ಅಮೆರಿಕ, ಬ್ರೆಜಿಲ್, ರಷ್ಯಾ, ಭಾರತದಂತಹ ದೇಶಗಳಲ್ಲಿ ಕೊರೋನಾ ಹಾವಳಿ ಜೋರಾಗಿದೆ.

ಆದ್ರೆ ಕಾಯಿಲೆಯ ತವರು ಚೀನಾದಲ್ಲಿ ಇದೇ ಮೊದಲ ಬಾರಿ ಒಂದೇ ಒಂದು ಪಾಸಿಟಿವ್ ಪ್ರಕರಣ ದೃಢಪಟ್ಟಿಲ್ಲ. ಚೀನಾದಲ್ಲಿ ಇದುವರೆಗೆ 82,971 ಜನರಿಗೆ ಸೋಂಕು ತಗುಲಿದೆ. ಈ ಪೈಕಿ  4,634 ಮಂದಿ ಬಲಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply