masthmagaa.com:

ಕೊರೋನಾ ವೈರಾಣು ಅಧಿಕೃತವಾಗಿ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್​ನಲ್ಲಿ. ಆದ್ರೀಗ ತನಗಂಟಿರುವ ಕಳಂಕವನ್ನ ದೂರ ಮಾಡುವ ಉದ್ದೇಶದಿಂದ 2019ರ ಬೇಸಿಗೆಯಲ್ಲೇ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕೊರೋನಾ ಹುಟ್ಟಿತ್ತು ಅಂತ ಚೀನಾ ಹೇಳಿದೆ. ಅದು ಹೇಗೆ ಅನ್ನೋದಕ್ಕೆ ಒಂದು ಕಥೆ ಬೇರೆ ಸೃಷ್ಟಿ ಮಾಡಿದೆ. ಹೇಳ್ತೀವಿ ನೋಡಿ.. ನೀರಿಗಾಗಿ ಮಂಗಗಳಂತಹ ವನ್ಯಜೀವಿಗಳು ದೊಡ್ಡದಾಗಿ ಜಗಳ ಮಾಡಿವೆ ಅಂತೆ. ಆಗ ಅದನ್ನ ಬಿಡಿಸಲು ಮನುಷ್ಯ ಮಧ್ಯಪ್ರವೇಶಿಸಿದಾಗ ವೈರಾಣು ಮನುಷ್ಯರಿಗೂ ಅಂಟಿರಬಹುದು ಅಂತ ಚೀನಾ ಹೇಳಿದೆ. ಮಂಗಗಳ ನಡುವೆ ದೊಡ್ಡ ಜಗಳ ಅಂತೆ.. ಅದ್ರಿಂದ ಮನುಷ್ಯರಿಗೆ ಸೋಂಕು ಹರಡಿದೆಯಂತೆ. ಚೀನಾದಲ್ಲಿ ಯಾವ್ದು ಮಂಗಗಳಿಲ್ವಾ, ಅಲ್ಲಿ ಅವುಗಳ ಮಧ್ಯೆ ಜಗಳ ನಡೆಯಲ್ವಾ.. ಈ ವೈರಾಣುವನ್ನ ಚೀನಾನೇ ಲ್ಯಾಬ್​ನಲ್ಲಿ ಸೃಷ್ಟಿಸಿ ಜಗತ್ತಿಗೆಲ್ಲಾ ಹರಡಿಸಿದೆ ಅನ್ನೋ ಒಂದು ವಾದ ಈಗಾಗಲೇ ಇದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಚೀನಾಗೆ ಹೋಗಿ ತನಿಖೆ ನಡೆಸಲಿದೆ. ಸೋಂಕು ತಮ್ಮ ದೇಶದಲ್ಲಿ ಹುಟ್ಟಿಲ್ಲ ಅನ್ನೋದನ್ನ ಅವ್ರು ಮೊದಲು ಸಾಬೀತು ಮಾಡಲಿ. ಆಮೇಲೆ ಭಾರತದ ವಿಚಾರಕ್ಕೆ ಬರಲಿ.

-masthmagaa.com

Contact Us for Advertisement

Leave a Reply