masthmagaa.com:

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್​’ ಲಸಿಕೆಯ 3ನೇ ಹಂತದ ಮಾನವ ಪ್ರಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಇವತ್ತು ಚಾಲನೆ ನೀಡಿದ್ದಾರೆ. ಇದರ ಪ್ರಯೋಗವು ಬೆಂಗಳೂರಿನ ವೈದೇಹಿ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸನ್ ಮತ್ತು ರಿಸರ್ಚ್ ಸೆಂಟರ್​ನಲ್ಲಿ ಆರಂಭವಾಗಿದೆ. ಸುಮಾರು 1,600ರಿಂದ 1,800 ಸ್ವಯಂ ಸೇವಕರ ಮೇಲೆ ಈ ಪ್ರಯೋಗ ನಡೆಯಲಿದೆ. 3ನೇ ಮತ್ತು ಕೊನೇ ಹಂತದ ಈ ಪ್ರಯೋಗ ಯಶಸ್ವಿಯಾಗಲಿ, ಸುರಕ್ಷಿತ ಲಸಿಕೆ ಸಿಗುವಂತಾಗಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಆಶಿಸಿದ್ದಾರೆ.

-masthmagaa.com

Contact Us for Advertisement

Leave a Reply