ಅಮೆರಿಕ ತಲುಪಿದ ಹೈಡ್ರಾಕ್ಸಿಕ್ಲೋರೋಕ್ವಿನ್..! ಎಷ್ಟು ಗೊತ್ತಾ..?

masthmagaa.com:

ಅಮೆರಿಕ: ಕೊರೋನಾ ಚಿಕಿತ್ಸೆಗೆ ಭಾರತ ಕಳುಹಿಸಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಅಮೆರಿಕ ತಲುಪಿದೆ. ಈ ಹಿಂದೆ ಅಮೆರಿಕ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ನೀಡುವಂತೆ ಭಾರತದ ಬಳಿ ಮನವಿ ಮಾಡಿತ್ತು. ಆದ್ರೆ ಭಾರತ ಪ್ರತಿಕ್ರಿಯಿಸದೇ ಇದ್ದಾಗ ಪ್ರತೀಕಾರದ ಎಚ್ಚರಿಕೆ ಕೂಡ ನೀಡಿತ್ತು. ನಂತರದಲ್ಲಿ ಭಾರತ ಮಾನವೀಯತೆ ದೃಷ್ಟಿಯಿಂದ ಅಮೆರಿಕ ಜೊತೆಗೆ ಜಗತ್ತಿನ ಇತರೆ ಕೊರೋನಾ ಪೀಡಿತ ದೇಶಗಳಿಗೂ ಔಷಧ ಪೂರೈಸಲು ನಿರ್ಧರಿಸಿತ್ತು. ಅದರಂತೆ ಭಾರತ ಕಳುಹಿಸಿದ ಔಷಧ ಈಗ ಅಮೆರಿಕ ತಲುಪಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕದಲ್ಲಿರೋ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು, ಕೊರೋನಾ ವಿರುದ್ಧದ ಹೋರಾಟದಲ್ಲಿ ನಮ್ಮ ಪಾಲುದಾರರನ್ನು ಬೆಂಬಲಿಸಲು ಭಾರತ ಕಳುಹಿಸಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಇಂದು ನ್ಯೂಯಾರ್ಕ್ ತಲುಪಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಕೆಲವೊಂದು ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.

ಭಾರತ ಅಮೆರಿಕಗೆ 35.82 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್​​ ಮಾತ್ರೆಗಳ ಜೊತೆಗೆ 9 ಟನ್ ಫಾರ್ಮಾಸ್ಯುಟಿಕಲ್ ಸಾಮಾಗ್ರಿ ಕೂಡ ರಫ್ತು ಮಾಡಿತ್ತು.

-masthmagaa.com

Contact Us for Advertisement

Leave a Reply