masthmagaa.com:

ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟ ಕಡಿಮೆಯಾಗುವ ಲಕ್ಷಣ ಕಾಣ್ತಿಲ್ಲ. ಪ್ರತಿದಿನ ಐದಾರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಡುತ್ತಿವೆ. ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ತಿಂಗಳ ಹಿಂದಷ್ಟೇ 10-11ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 4ನೇ ಸ್ಥಾನದಲ್ಲಿದೆ.

ಅಷ್ಟೇ ಅಲ್ಲ, ರಾಜ್ಯವಾರು ಆ್ಯಕ್ಟಿವ್ ಅಥವಾ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಒಟ್ಟು ಮೃತಪಟ್ಟ ಸೋಂಕಿತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಬಂದಿದೆ. ಸ್ವಲ್ಪ ಸಮಾಧಾನದ ವಿಚಾರ ಅಂದ್ರೆ 20 ದಿನಗಳ ಹಿಂದೆ ಗುಣಮುಖರಾದವರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 5ನೇ ಸ್ಥಾನಕ್ಕೆ ಬಂದಿದೆ. ಅಂದ್ರೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ ಅಂತ ಅರ್ಥ.

ಒಟ್ಟು ಸೋಂಕಿತರು (ಟಾಪ್-5 ರಾಜ್ಯ):

1. ಮಹಾರಾಷ್ಟ್ರ: 4.79 ಲಕ್ಷ

2. ತಮಿಳುನಾಡು: 2.79 ಲಕ್ಷ

3. ಆಂಧ್ರಪ್ರದೇಶ: 1.96 ಲಕ್ಷ

4. ಕರ್ನಾಟಕ: 1.58 ಲಕ್ಷ

5. ದೆಹಲಿ: 1.41 ಲಕ್ಷ

 

ಸಕ್ರಿಯ ಪ್ರಕರಣಗಳು (ಟಾಪ್-5 ರಾಜ್ಯ):

1. ಮಹಾರಾಷ್ಟ್ರ: 1.46 ಲಕ್ಷ

2. ಆಂಧ್ರಪ್ರದೇಶ: 82,000

3. ಕರ್ನಾಟಕ: 75,000

4. ತಮಿಳುನಾಡು: 53,000

5. ಉತ್ತರ ಪ್ರದೇಶ: 43,000

 

ಒಟ್ಟು ಮೃತಪಟ್ಟವರು (ಟಾಪ್ -5 ರಾಜ್ಯ):

1. ಮಹಾರಾಷ್ಟ್ರ: 16,000

2. ತಮಿಳುನಾಡು: 4,500

3. ದೆಹಲಿ: 4,000

4. ಕರ್ನಾಟಕ: 2,800

5. ಗುಜರಾತ್: 2,500

 

ಒಟ್ಟು ಗುಣಮುಖ (ಟಾಪ್ -5 ರಾಜ್ಯಗಳು):

1. ಮಹಾರಾಷ್ಟ್ರ: 3.16 ಲಕ್ಷ

2. ತಮಿಳುನಾಡು: 2.21 ಲಕ್ಷ

3. ದೆಹಲಿ: 1.27 ಲಕ್ಷ

4. ಆಂಧ್ರಪ್ರದೇಶ: 1.12 ಲಕ್ಷ

5. ಕರ್ನಾಟಕ: 80,000

-masthmagaa.com

Contact Us for Advertisement

Leave a Reply