ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 73ಕ್ಕೆ ಏರಿಕೆ

masthmagaa.com:

ದೆಹಲಿ: ಚೀನಾದ ವುಹಾನ್​​ನಲ್ಲಿ ಹುಟ್ಟಿದ ಕೊರೋನಾ ಹಾವಳಿ ಭಾರತದಲ್ಲೂ ಜಾಸ್ತಿಯಾಗುತ್ತಲೇ ಇದೆ. ಒಟ್ಟಾರೆ ಕೊರೋನಾ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ಧಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿದಿನವೂ ವರದಿ ಪಡೆಯುತ್ತಿದೆ. ಅಲ್ಲದೆ ಇನ್ನೂ ವಿದೇಶಗಳಲ್ಲಿ ಸಿಲುಕಿರುವ ಭಾರತದ ಪ್ರಜೆಗಳನ್ನು ವಾಪಸ್ ತರುವತ್ತ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ದೇಶದಾದ್ಯಂತ 30ರಿಂದ 40 ಸಾವಿರ ಜನರ ಮೇಲೆ ನಿಗಾ ಇರಿಸಲಾಗಿದೆ ಅಂದ್ರು.

ಇನ್ನು ವಿದೇಶಗಳಿಂದ ವಾಪಸ್ ಬರುತ್ತಿರುವವರ ಮೇಲೆ ನಿಗಾ ಇರಿಸಲಾಗುತ್ತಿದೆ. ಏರ್​ಪೋರ್ಟ್​​​ಗಳಲ್ಲಿ ಸ್ಕ್ರೀನಿಂಗ್​​ಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಲ್ಲವೂ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಕೊರೋನಾ ಪರೀಕ್ಷೆ ಎಲ್ಲಾ ಲ್ಯಾಬ್​ಗಳಲ್ಲಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ದೇಶದ 51 ಕಡೆಗಳಲ್ಲಿ ಲ್ಯಾಬ್​​ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸ್ಯಾಂಪಲ್ ಪಡೆಯಲು 56 ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಅಂತ ಮಾಹಿತಿ ನೀಡಿದ್ರು.

ಬಳಿಕ ಮಾತನಾಡಿದ ವಿದೇಶಾಂಗ ಸಚಿವ ಎಸ್​​.ಜೈಶಂಕರ್​​, ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಇರಾನ್​ನಲ್ಲಿ ಈಗಲೂ 6 ಸಾವಿರ ಮಂದಿ ಭಾರತೀಯರು ಸಿಲುಕಿದ್ದಾರೆ ಅಂದ್ರು.

73_031220012354.jpg

-masthmagaa.com

Contact Us for Advertisement

Leave a Reply