ಏ.20ರಿಂದ ಯಾವ ಕ್ಷೇತ್ರಗಳಿಗೆ ವಿನಾಯ್ತಿ..? ಕೇಂದ್ರದಿಂದ ಹೊಸ ಲಿಸ್ಟ್ ರಿಲೀಸ್​​

masthmagaa.com:

ದೇಶದಲ್ಲಿ ಮೇ 3ರವರೆಗೆ ಲಾಕ್​ಡೌನ್ ಹೇರಲಾಗಿದ್ದು, ಏಪ್ರಿಲ್ 20ರ ನಂತರ ಸ್ವಲ್ಪ ಸಡಿಲಗೊಳಿಸಲಾಗುತ್ತೆ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಆದ್ರೆ ಏಪ್ರಿಲ್ 20ರ ನಂತರ ಯಾವೆಲ್ಲಾ ಕ್ಷೇತ್ರಗಳಿಗೆ ವಿನಾಯಿತಿ ಇರುತ್ತೆ ಅನ್ನೋ ಬಗ್ಗೆ ತುಂಬಾ ಗೊಂದಲ ಉಂಟಾಗಿತ್ತು. ಒಬ್ಬೊಬ್ಬರು ಒಂದೊಂದು ರೀತಿ ವರದಿ ಮಾಡುತ್ತಿದ್ದರು. ಇದೀಗ ಕೇಂದ್ರ ಸರ್ಕಾರವೇ ಈ ಬಗ್ಗೆ ಸ್ಪಷ್ಟಪಡಿಸಿದ್ದು, ನಾನ್​​ ಹಾಟ್​ಸ್ಪಾಟ್​ ಅಂದ್ರೆ ಆರೆಂಜ್ ವಲಯದಲ್ಲಿ ಏನೆಲ್ಲಾ ವಿನಾಯಿತಿ ನೀಡಲಾಗುತ್ತೆ ಅಂತ ತಿಳಿಸಿದೆ. ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 20ರ ಬಳಿಕ ಯಾವ ಕ್ಷೇತ್ರಗಳಿಗೆ ವಿನಾಯಿತಿ..? 
* ಆಯುಷ್ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳು
* ಎಲ್ಲಾ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು
* ಮೀನುಗಾರಿಕೆ, ಮೀನು ಸಾಕಾಣಿಕೆ ಸಂಬಂಧಿತ ಚಟುವಟಿಕೆ
* ಟೀ, ಕಾಫಿ, ರಬ್ಬರ್ ಪ್ಲಾಂಟೇಷನ್​​ಗಳಲ್ಲಿ ಶೇ.50ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವಹಣೆ
* ಪಶುಸಂಗೋಪನೆ ಸಂಬಂಧಿತ ಚಟುವಟಿಕೆಗಳು
* ಹಣಕಾಸು ವಲಯದ ಕಾರ್ಯಚಟುವಟಿಕೆ
* ಸಾಮಾಜಿಕ ವಲಯ ಅಂದ್ರೆ ಅನಾಥಾಲಯ, ವೃದ್ಧಾಶ್ರಮಗಳ ಚಟುವಟಿಕೆಗಳಿಗೆ ಅವಕಾಶ
* ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸುವ ಮೂಲಕ ಮನ್ರೇಗಾ ಕಾರ್ಮಿಕರಿಗೆ ಕೆಲಸ
* ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯ ನೀಡುವ ಸಂಸ್ಥೆಗಳು(ಗ್ಯಾಸ್, ವಿದ್ಯುತ್, ನೀರು, ದೂರವಾಣಿ)
* ಸರಕು ಸಾಗಣೆ ವಾಹನಗಳಿಗೆ ಅವಕಾಶ( ರಾಜ್ಯ ಮತ್ತು ಅಂತರಾಜ್ಯ)
* ಆನ್​ಲೈನ್ ಕೋಚಿಂಗ್ ಕ್ಲಾಸ್​​ಗಳಿಗೆ ಅವಕಾಶ
* ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ
* ವಾಣಿಜ್ಯ, ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆ
* ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳ ಕಾರ್ಯನಿರ್ವಹಣೆ
* ನಿರ್ಮಾಣ ಕಾಮಗಾರಿಗಳಿಗೆ ಅವಕಾಶ
* ತುರ್ತು ಅಗತ್ಯತೆಗಳಿಗೆ ಖಾಸಗಿ ವಾಹನ ಬಳಸಬಹುದು ( ವೈದ್ಯಕೀಯ ಅಗತ್ಯತೆ, ಗರ್ಭಿಣಿಯರನ್ನು ಕರೆದೊಯ್ಯಲು, ಅಗತ್ಯ ವಸ್ತುಗಳ ಪೂರೈಕೆಗೆ, ವಿನಾಯಿತಿ ನೀಡಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಕೆಲಸದ ಸ್ಥಳಕ್ಕೆ ತೆರಳಲು)
* ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಕಚೇರಿಗಳು ಎಂದಿನಂತೆ ಓಪನ್

ಆದ್ರೆ ಒಂದು ಅಂಶವನ್ನು ಗಮನಿಸಬೇಕು.. ಇವೆಲ್ಲಾ ಆರೆಂಜ್ ಜೋನ್​ನಲ್ಲಿ ಬರುವ ಜಿಲ್ಲೆಗಳಿಗೆ ಮಾತ್ರವೇ ಅನ್ವಯವಾಗುತ್ತೆ. ಕಂಟೈನ್​ಮೆಂಟ್ ವಲಯಗಳಲ್ಲಿ ಈಗಿರುವಂತೆಯೇ ಕಠಿಣ ಲಾಕ್​ಡೌನ್ ಮುಂದುವರಿಯಲಿವೆ..

-masthmagaa.com

Contact Us for Advertisement

Leave a Reply