12 ವರ್ಷಗಳ ಬಳಿಕ ಷೇರು ವಹಿವಾಟು ಸ್ಥಗಿತ..! ಐತಿಹಾಸಿಕ ಕುಸಿತ

masthmagaa.com:

ವಿಶ್ವದಾದ್ಯಂತ ಕೊರೋನಾ ಹಾವಳಿ ಮುಂದುವರಿಸಿದ್ದು, ಷೇರುಮಾರುಕಟ್ಟೆ ತಲ್ಲಣಗೊಂಡಿದೆ. ನಿನ್ನೆಯಷ್ಟೇ ಭಾರಿ ಕುಸಿತ ಕಂಡಿದ್ದ ಸೆನ್ಸೆಕ್​ ಮತ್ತು ನಿಫ್ಟಿ ಇಂದು ದಿನದ ಆರಂಭದಲ್ಲೇ ಕುಸಿತ ಕಂಡಿದೆ. ಹೀಗಾಗಿ 45 ನಿಮಿಷಗಳ ಕಾಲ ಷೇರು ವಹಿವಾಟನ್ನು ಸ್ಥಗಿತಗೊಳಿಸಲಾಯ್ತು. ಇಂದು ದಿನದ ಆರಂಭದಲ್ಲೇ ಸೆನ್ಸೆಕ್ಸ್​ ಮತ್ತು ನಿಫ್ಟಿ ಶೇ.10ರಷ್ಟು ಕುಸಿತ ಕಂಡಿದೆ.

ಈ ಹಿಂದೆ 2008ರಲ್ಲೂ ಷೇರು ಮಾರುಕಟ್ಟೆಯನ್ನು ಕೆಲ ಸಮಯದವರೆಗೆ  ಬಂದ್ ಮಾಡಲಾಗಿತ್ತು. ಆಗಲೂ ವಿಶ್ವದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಷೇರು ಮಾರುಕಟ್ಟೆ ವ್ಯವಹಾರವನ್ನು45 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಇಂದು ದಿನದ ಆರಂಭದಲ್ಲೇ ಸೆನ್ಸೆಕ್ಸ್ 3090 ಅಂಕ ಕುಸಿದು, 29,687ಕ್ಕೆ ಇಳಿದಿದ್ರೆ, ನಿಫ್ಟಿ  966 ಅಂಕಗಳ ಕುಸಿತದೊಂದಿಗೆ 8,624 ಇಳಿಕೆಯಾಗಿದೆ. ಇನ್ನು ರೂಪಾಯಿ ಮೌಲ್ಯದಲ್ಲೂ ಕುಸಿತ ಕಂಡು ಬಂದಿದ್ದು, ಡಾಲರ್ ಮುಂದೆ ರೂಪಾಯಿ ಮೌಲ್ಯ 74.50 ರೂ. ಆಗಿದೆ.

masthmagaa.com:

Contact Us for Advertisement

Leave a Reply