ಲಾಕ್​ಡೌನ್​​: ಏ.14ರ ಬಳಿಕವೂ ಕಂಟಿನ್ಯೂ..! ಮೋದಿ ಹೇಳಿದ್ದೇನು..?

masthmagaa.com:

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್​ಡೌನ್ ಏಪ್ರಿಲ್ 14ರ ನಂತರವೂ ಮುಂದುವರಿಯೋ ಸಾಧ್ಯತೆ ಇದೆ. ಯಾಕಂದ್ರೆ ಇಂದು ನಡೆದ ಮಹತ್ವದ ಸಭೆಯಲ್ಲಿ ಪ್ರಧಾನಿ ಮೋದಿ ಲಾಕ್​ಡೌನ್ ಮುಂದುವರಿಸುವ ಸೂಚನೆ ಕೊಟ್ಟಿದ್ದಾರೆ. ವಿವಿಧ ಪಕ್ಷಗಳ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಯಾವುದೇ ಕಾರಣಕ್ಕೂ ಲಾಕ್​ಡೌನ್ ತೆರವುಗೊಳಿಸಲು ಸಾಧ್ಯವಿಲ್ಲ. ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಿ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.

ಜೊತೆಗೆ ಕೊರೋನಾಗೂ ಮುನ್ನ ಮತ್ತು ಕೊರೋನಾದ ಬಳಿಕ ದೇಶದ ಜನರ ಜೀವನ ಶೈಲಿಯೇ ಬದಲಾಗುತ್ತೆ. ಜನರ ವರ್ತನೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಜೊತೆಗೆ ಸಾಮಾಜಿಕವಾಗಿ ಮತ್ತು ವೈಯಕ್ತಿಕವಾಗಿಯೂ ಹಲವು ಬದಲಾವಣೆಗಳಾಗಲಿದೆ ಅಂತ ಹೇಳಿದ್ರು.

-masthmagaa.com

 

Contact Us for Advertisement

Leave a Reply