ಆಸ್ಪತ್ರೆಯಿಂದಲೇ ಓಡಿಹೋದ ಕೊರೋನಾ ಶಂಕಿತ ರೋಗಿಗಳು..!

masthmagaa.com:

ದೇಶದಲ್ಲಿ ಇದುವರೆಗೆ ಇಬ್ಬರನ್ನು ಬಲಿ ಪಡೆದು ಸಾಕಷ್ಟು ಭೀತಿ ಹುಟ್ಟಿಸಿರೋ ಕೊರೋನಾ ವೈರಸ್ ಕುರಿತು ದಿನಕ್ಕೊಂದು ವಿಚಿತ್ರ ಸುದ್ದಿಗಳು ವರದಿಯಾಗ್ತಿವೆ. ಇದೀಗ ಕೊರೋನಾ ವೈರಸ್​ ಸೋಂಕು ತಗುಲಿದ ಐವರು ಶಂಕಿತರು ತಾವು ದಾಖಲಾಗಿದ್ದ ಆಸ್ಪತ್ರೆಯಿಂದಲೇ ಪರಾರಿಯಾಗಿರೋ ಘಟನೆ ನಡೆದಿದೆ. ಇದು ನಡೆದಿರೋದು ಮಹಾರಾಷ್ಟ್ರದ ನಾಗ್ಪುರದಲ್ಲಿ.

ಜ್ವರ, ಶೀತ, ಗಂಟಲು ನೋವು ಹಿನ್ನೆಲೆ 5 ಜನ ಕೊರೋನಾ ವೈರಸ್​ ಶಂಕಿತರು ಐಸೋಲೇಷನ್​ ವಾರ್ಡ್​ಗೆ ದಾಖಲಾಗಿದ್ದರು. ತಕ್ಷಣ ವೈದ್ಯರು ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ವರದಿಯಲ್ಲಿ ಒಂದು ಪ್ರಕರಣ ನೆಗೆಟಿವ್ ಅಂತ ಬಂದಿತ್ತು. ಆದ್ರೆ ಉಳಿದವರ ವರದಿ ಬರುವ ಮುನ್ನವೇ ಎಲ್ಲರೂ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಸದ್ಯ ಅವರನ್ನು ಪತ್ತೆಹೆಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಐಸೋಲೇಷನ್​ ವಾರ್ಡ್​ಗೆ ದಾಖಲಿಸೋದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply