ಕೊಹ್ಲಿಗೆ ತಲೆ ಬೋಳಿಸಿಕೊಳ್ಳುವ ಚಾಲೆಂಜ್ ಹಾಕಿದ ಡೇವಿಡ್ ವಾರ್ನರ್..!

masthmagaa.com:

ಕೊರೋನಾ ವೈರಸ್​ ವಿರುದ್ಧ ಇಡೀ ವಿಶ್ವದ ವೈದ್ಯರು, ನರ್ಸ್​ಗಳು ಹಾಗೂ ಇತರ ಸಿಬ್ಬಂದಿ ಹಗಲಿರುಳು ಹೋರಾಟ ನಡೆಸ್ತಿದ್ದಾರೆ. ಇಂತಹವರಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ತಮ್ಮ ತಲೆಯನ್ನ ಶೇವ್ ಮಾಡಿದ್ದಾರೆ. ಇದರ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ಟೀಂ ಇಂಡಿಯಾ ನಾಯಕ​ ವಿರಾಟ್​ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್, ಪ್ಯಾಟ್​ ಕಮಿನ್ಸ್, ಆಡಂ ಝಾಂಪಾ, ಜೋ ಬರ್ನ್ಸ್​, ಸ್ಟಾಯ್ನಸ್​ಗೂ ಇದೇ ರೀತಿ ಮಾಡುವಂತೆ ಚಾಲೆಂಜ್ ಹಾಕಿದ್ದಾರೆ.

ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆ ವಿರಾಟ್​ ಕೊಹ್ಲಿ ಇತ್ತೀಚೆಗಷ್ಟೇ ಮನೆಯಲ್ಲೇ ಪತ್ನಿ ಅನುಷ್ಕಾ ಶರ್ಮಾ ಕೈಯಲ್ಲಿ ಹೇರ್​ ಕಟ್​ ಮಾಡಿಸಿದ್ರು. ಇದೀಗ ವಾರ್ನರ್ ಚಾಲೆಂಜ್ ಒಪ್ಪಿಕೊಂಡು ಕ್ಯಾಪ್ಟನ್ ಕೊಹ್ಲಿ ತಲೆ ಬೋಳಿಸುತ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.

ಕೊರೋನಾ ವೈರಸ್​ಗೆ ಆಸ್ಟ್ರೇಲಿಯಾ ಕೂಡ ನಲುಗಿ ಹೋಗಿದ್ದು ಇದುವರಗೆ 18 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ 4,500ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply