ಕೊರೋನಾ ವೈರಸ್​ ವಿರುದ್ಧ ದೆಹಲಿಯಲ್ಲಿ ಪ್ಲಾಸ್ಮಾ ಅಸ್ತ್ರ..

masthmagaa.com:

ಇಡೀ ಪ್ರಪಂಚದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ವೈರಸ್​ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಆದ್ರೆ ಇದುವರೆಗೆ ಕೊರೋನಾಗೆ ನಿರ್ದಿಷ್ಟ ಲಸಿಕೆ  ಸಿಕ್ಕಿಲ್ಲ. ಆದ್ರೆ ಈಗಾಗಲೇ ಇರುವ ವಿವಿಧ ಔಷಧಿ, ಚಿಕಿತ್ಸೆಗಳನ್ನ ಕೊಟ್ಟು ಸೋಂಕಿತರ ಪ್ರಾಣ ಉಳಿಸುವ ಕೆಲಸ ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲೂ ನಡೀತಾ ಇದೆ.

ಅದ್ರಲ್ಲಿ ಪ್ಲಾಸ್ಮಾ ಚಿಕಿತ್ಸೆ ಕೂಡ ಒಂದು. ಸಂಪೂರ್ಣವಾಗಿ ಗುಣಮುಖರಾದ ಸೋಂಕಿತರ ರಕ್ತದಲ್ಲಿರುವ ಪ್ಲಾಸ್ಮಾ ಕಣಗಳನ್ನ ತೆಗೆದು ಬೇರೆ ಸೋಂಕಿತರಿಗೆ ನೀಡುವುದೇ ಪ್ಲಾಸ್ಮಾ ಥೆರಪಿ. ಆರಂಭದಲ್ಲಿ ಸೋಂಕು ಹೆಚ್ಚಾದಾಗ ದೇಶದಲ್ಲಿ ಈ ಪ್ಲಾಸ್ಮಾ ಚಿಕಿತ್ಸೆ ಸಾಕಷ್ಟು ಸದ್ದು ಮಾಡಿತ್ತು, ಸುದ್ದಿ ಮಾಡಿತ್ತು.

ಇದನ್ನೂ ಓದಿ: ದೇಶದಲ್ಲಿ ಸತತ ಎರಡನೇ ದಿನವೂ 19,000+ ಜನರಿಗೆ ಕೊರೋನಾ..!

ವಿವಿಧ ರಾಜ್ಯಗಳಲ್ಲಿ ಈ ಪ್ಲಾಸ್ಮಾ ಚಿಕಿತ್ಸೆ ಪಡೆದು ರೋಗಿಗಳು ಗುಣಮುಖರಾದ ಹಲವು ಉದಾಹರಣೆಗಳಿವೆ. ಈ ಹಿನ್ನೆಲೆ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರೋ ದೆಹಲಿಯಲ್ಲಿ ಈಗ ‘ಪ್ಲಾಸ್ಮಾ ಬ್ಯಾಂಕ್’ ತೆರೆಯಲು ಅಲ್ಲಿನ ಆಮ್ ಆದ್ಮಿ ಪಕ್ಷದ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿರೋ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ತೆರೆಯಲಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಇದು ಕೆಲಸ ಆರಂಭಿಸಲಿದೆ. ಹೀಗಾಗಿ ಕೊರೋನಾ ಬಂದು ಗುಣಮುಖರಾದವರು ತಮ್ಮ ರಕ್ತದಲ್ಲಿರೋ ಪ್ಲಾಸ್ಮಾವನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐದೇ ದಿನದಲ್ಲಿ ಕೊರೋನಾ ಪ್ರಕರಣಗಳು ಡಬಲ್..!

ದೆಹಲಿಯ ಇನ್​ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬೈಲಿಯರಿ ಸೈನ್ಸಸ್​ನಲ್ಲಿ ಪ್ಲಾಸ್ಮಾ ಬ್ಯಾಂಕ್ ಅನ್ನು ತೆರೆಯಲಾಗುತ್ತದೆ. ಪ್ಲಾಸ್ಮಾ ಬೇಕಾದವರು ವೈದ್ಯರ ಶಿಫಾರಸು ಮೇರೆಗೆ ಇಲ್ಲಿಂದ ಪಡೆಯಬಹುದು. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಉಂಟಾಗಿದೆ. ಹೀಗಾಗಿ ಕೊರೋನಾವನ್ನು ಹೇಗಾದ್ರೂ ಕಂಟ್ರೋಲ್​ಗೆ ತರಬೇಕು ಅಂದುಕೊಂಡಿರೋ ಕೇಜ್ರಿವಾಲ್ ಸರ್ಕಾರ​ ಪ್ಲಾಸ್ಮಾ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಿದೆ.

-masthmagaa.com

Contact Us for Advertisement

Leave a Reply