masthmagaa.com:

ಮುಂಬರುವ ಹೈದ್ರಾಬಾದ್ ಮಹಾನಗರ ಪಾಲಿಕೆಯ (GHMC) ಚುನಾವಣಾ ಪ್ರಚಾರಕ್ಕೆ ಬಿಜೆಪಿ ಕಡೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬರಬಹುದು ಅಂತ ತೆಲಂಗಾಣ ಸಚಿವ ಕೆ.ಟಿ.ಆರ್. ರಾವ್ ಹೇಳಿದ್ದಾರೆ. ‘ಸ್ಥಳೀಯ ವಿಚಾರಗಳ ಬಗ್ಗೆ ಮಾತನಾಡಲು ಬಿಜೆಪಿ ಇಷ್ಟವಿಲ್ಲ. ಹೀಗಾಗಿ ಅವರು ಅಕ್ಬರ್, ಬಾಬರ್ ಮತ್ತು ಬಿನ್ ಲಾಡೆನ್ ಬಗ್ಗೆ ಮಾತನಾಡುತ್ತಾರೆ. ಇವರೆಲ್ಲಾ ಹೈದ್ರಾಬಾದ್​ ಮತದಾರರಲ್ಲ. ಆದ್ರೂ ಬಿಜೆಪಿಯವರು ಇವರ ಬಗ್ಗೆ ಮಾತಾಡ್ತಾರೆ. ಬಿಜೆಪಿಯವರಿಗೆ ಇದೊಂದು ಸ್ಥಳೀಯ ಚುನಾವಣೆ ಅನ್ನೋದು ಮರೆತು ಹೋಗಿರ್ಬೇಕು. ದೆಹಲಿಯಿಂದ ರಾಷ್ಟ್ರ ಮಟ್ಟದ ನಾಯಕರು ಬರ್ತಿದ್ದಾರೆ. ಅಂತಾರಾಷ್ಟ್ರೀಯ ನಾಯಕರು ಕೂಡ ಬರಬಹುದು. ಡೊನಾಲ್ಡ್​ ಟ್ರಂಪ್ ಬಿಜೆಪಿ ಫ್ರೆಂಡ್ ಆಗಿರೋದ್ರಿಂದ ಅವರು ಕೂಡ ಬರಬಹುದು. ನಮಗೆ ಕೇವಲ ಹೈದ್ರಾಬಾದ್​ ಜನತೆಯೆ ಆಶೀರ್ವಾದ ಬೇಕು ಅಷ್ಟೇ’ ಅಂತ ಕೆ.ಟಿ.ಆರ್. ರಾವ್ ಹೇಳಿದ್ದಾರೆ. ನಿನ್ನೆಯಷ್ಟೇ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್, ‘ನಾವು ಈ ಚುನಾವಣೆ ಗೆದ್ದ ಬಳಿಕ ಹೈದ್ರಾಬಾದ್ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡ್ತೀವಿ’ ಅಂತ ಹೇಳಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

-masthmagaa.com

Contact Us for Advertisement

Leave a Reply