masthmagaa.com:

ಭಾರತ-ಚೀನಾ ನಡುವೆ ಪೂರ್ವ ಲಡಾಖ್​ನಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಉಭಯ ದೇಶಗಳು ಗಡಿಯಲ್ಲಿ ಸೇನಾ ಜಮಾವಣೆ ಹೆಚ್ಚಿಸಿವೆ. ಇದರ ನಡುವೆಯೇ ಶೀಘ್ರದಲ್ಲೇ ಭಾರತೀಯ ಸೇನೆಗೆ ಎರಡು ದಿಬ್ಬದ ಒಂಟೆಗಳು ಸೇರ್ಪಡೆಯಾಗಲಿವೆ. ಇವು ಭಾರತ ಚೀನಾ ಗಡಿಯಲ್ಲಿ ಗಸ್ತು ತಿರುಗಲು ಭಾರತೀಯ ಸೇನೆಗೆ ನೆರವಾಗಲಿವೆ.

ಈ ಸಂಬಂಧ ಪೂರ್ವ ಲಡಾಖ್​ ಪ್ರದೇಶದಲ್ಲಿ ಡಿಆರ್​ಡಿಒ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಈ ವೇಳೆ ಎರಡು ದಿಬ್ಬದ ಒಂಟೆಗಳು 17,000 ಅಡಿ ಎತ್ತರದ ಪ್ರದೇಶಗಳಲ್ಲಿ 170 ಕೆ.ಜಿ.ಯಷ್ಟು ಸರಕು ಸರಂಜಾಮುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿವೆ ಅನ್ನೋದು ಗೊತ್ತಾಗಿದೆ. ಹೀಗೆ ಸತತ 12 ಕಿ.ಮೀ.ವರೆಗೆ ಭಾರತ-ಚೀನಾ ಗಡಿಯಲ್ಲಿ ಗಸ್ತು ತಿರುಗಲಿವೆ ಅಂತ ಡಿಆರ್​ಡಿಒ ವಿಜ್ಞಾನಿಗಳು ಹೇಳಿದ್ದಾರೆ.

ಈ ಡಬಲ್ ಹಂಪ್ ಒಂಟೆಗಳು ಲಡಾಖ್​ ಭಾಗದಲ್ಲಿ ಕಂಡುಬರುವ ಪ್ರಾಣಿಯಾಗಿದೆ. ಇವುಗಳನ್ನು ರಾಜಸ್ಥಾನದಿಂದ ತಂದಿದ್ದ ಸಿಂಗಲ್​ ಹಂಪ್ ಒಂಟೆಗಳ ಜೊತೆಗೂ ಹೋಲಿಸಿ ನೋಡಲಾಗಿದೆ. ಈ ವೇಳೆ ಎರಡು ದಿಬ್ಬವಿರುವ ಒಂಟೆಗಳು ಆಹಾರ ಮತ್ತು ನೀರಿಲ್ಲದೆ ಮೂರು ದಿನಗಳ ಕಾಲ ಬದುಕಬಲ್ಲವು ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply