FDA ಪ್ರಶ್ನೆ ಪತ್ರಿಕೆ ಲೀಕ್​ ಮಾಡಿದ 14 ಜನ ಅರೆಸ್ಟ್, ಲಕ್ಷ ಲಕ್ಷ ಹಣ ಸೀಜ್​!

masthmagaa.com:

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇವತ್ತು FDA ಸ್ಪರ್ಧಾತ್ಮಕ ಪರೀಕ್ಷೆ ನಡೀಬೇಕಿತ್ತು. ಆದ್ರೆ ನಿನ್ನೆ ಸಂಜೆ ವೇಳೆಗೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಮಾಹಿತಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಿಕ್ಕಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಇಂದು ನಡೀಬೇಕಿದ್ದ ಪರೀಕ್ಷೆಗಳನ್ನ ಪೋಸ್ಟ್​ಪೋನ್ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 14 ಜನರನ್ನ ಅರೆಸ್ಟ್ ಮಾಡಲಾಗಿದೆ ಅಂತ ಬೆಂಗಳೂರು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಬಂಧಿತರ ಬಳಿ ಇದ್ದ 35 ಲಕ್ಷ ರೂಪಾಯಿ ನಗದು ಹಣವನ್ನ ಸೀಜ್ ಮಾಡಲಾಗಿದೆ. ಇನ್ನು ಪರೀಕ್ಷೆಗೆ ಅಂತ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬಂದಿದ್ದ ಅಭ್ಯರ್ಥಿಗಳು ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವರು ಯಾರೇ ಇದ್ರೂ ಅರೆಸ್ಟ್ ಮಾಡ್ತೀವಿ ಅಂತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply