masthmagaa.com:

ಏಲಿಯನ್ ಅಥವಾ ಅನ್ಯಗ್ರಹ ಜೀವಿ​.. ಈ ಹೆಸರು ಕೇಳಿದ್ರೇನೆ ಒಂಥರಾ ಕುತೂಹಲ. ಇವು ನಿಜವಾಗಿಯೂ ಇವೆಯಾ ಅಥವಾ ಕೇವಲ ಸಿನಿಮಾಗಳಲ್ಲಿ ತೋರಿಸೋಕೆ ಮಾತ್ರನಾ ಅನ್ನೋ ಪ್ರಶ್ನೆ ನಮಗೆ, ನಿಮಗೆ, ಎಲ್ಲರಿಗೂ ದಶಕಗಳಿಂದ ಕಾಡ್ತಿದೆ. ಆದ್ರೆ ಇಂತಹ ಪ್ರಶ್ನೆ, ಅನುಮಾನಗಳಿಗೆ ಈಗ ವಿಜ್ಞಾನಿಯೊಬ್ಬರು ಉತ್ತರ ಕೊಟ್ಟಿದ್ದಾರೆ. ಇವರು ಅಂತಿಂತಾ ವಿಜ್ಞಾನಿ ಅಲ್ಲ.. 1981ರಿಂದ 2010ರವರೆಗೆ ಇಸ್ರೇಲ್​ ಸ್ಪೇಸ್​ ಸೆಕ್ಯೂರಿಟಿ ಪ್ರೋಗ್ರಾಮ್​ನ ಮುಖ್ಯಸ್ಥರಾಗಿದ್ದವರು. ಅವರ ಹೆಸರು ಹೇಮ್ ಯಾಷ್ಡ್ (Haim Eshed)​ ಅಂತ. ಸಂದರ್ಶನವೊಂದರಲ್ಲಿ ಅವರು ಆಡಿದ ಮಾತು, ಬಿಚ್ಟಿಟ್ಟ ವಿಚಾರಗಳು ಒಂದಕ್ಕಿಂತ ಒಂದು ರೋಚಕವಾಗಿದೆ. ಅದನ್ನ ಹೇಳ್ತಾ ಹೋಗ್ತೀವಿ ನೋಡಿ.. ಏಲಿಯನ್​ಗಳು ಇರೋದು ನಿಜ. ನಮ್ಮ ಸರ್ಕಾರಗಳ ಜೊತೆ ಅವು ರಹಸ್ಯವಾಗಿ ಕೆಲಸ ಮಾಡುತ್ತಿವೆ. ಅವುಗಳು ತಮ್ಮದೇ ಆದ ಸಂಘಟನೆಯನ್ನ ಹೊಂದಿವೆ. ಅದರ ಹೆಸರು ‘ಗ್ಯಾಲಾಕ್ಟಿಕ್ ಫೆಡರೇಷನ್’ (Galactic Federation) ಅಂತ ಹೇಮ್ ಯಾಷ್ಡ್​ ಹೇಳಿದ್ದಾರೆ. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕೂಡ ಏಲಿಯನ್​ಗಳ ಬಗ್ಗೆ ಜಗತ್ತಿಗೆ ತಿಳಿಸಲು ಮುಂದಾಗಿದ್ರು. ಆದ್ರೆ ಸತ್ಯವನ್ನ ಕೇಳಲು ಜನ ಇನ್ನೂ ರೆಡಿ ಇಲ್ಲ ಅನ್ನೋ ಕಾರಣಕ್ಕೆ ತಮ್ಮ ಬಾಯಿಯನ್ನ ಮುಚ್ಚಿದ್ರು. ಅಮೆರಿಕ ಸರ್ಕಾರ ಮತ್ತು ಏಲಿಯನ್​ಗಳ ನಡುವೆ ಒಪ್ಪಂದವಾಗಿದೆ. ಏಲಿಯನ್​ಗಳ ಬಗ್ಗೆ ಇಸ್ರೇಲ್​ನಲ್ಲಿ ಎಕ್ಸ್​ಪರಿಮೆಂಟ್​ ನಡೆಸಲು ನಮ್ಮ​ ಜೊತೆಗೂ ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಅಮೆರಿಕನ್ನರು ಕೂಡ ಸಂಶೋಧನೆ ನಡೆಸುತ್ತಿದ್ದು ಬ್ರಹ್ಮಾಂಡದ ಸಂಪೂರ್ಣ ರಹಸ್ಯವನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾವು ಅವರಿಗೆ ಹೆಲ್ಪರ್​ಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇಷ್ಟೇ ಅಲ್ಲ, ಮಂಗಳ ಗ್ರಹದಲ್ಲಿ ಅಂಡರ್​ಗ್ರೌಂಡ್​ ಸ್ಪೇಸ್​ ಬೇಸ್​ ಇದೆ. ಅಲ್ಲಿ ಮನುಷ್ಯ ಮತ್ತು ಏಲಿಯನ್​ಗಳು ಅಕ್ಕ-ಪಕ್ಕ ಕೂತ್ಕೊಂಡು ಕೆಲಸ ಮಾಡುತ್ತಿದ್ದಾರೆ ಅಂತ 87 ವರ್ಷ ವಯಸ್ಸಿನ ಹೇಮ್ ಯಾಷ್ಡ್ ಹೇಳಿದ್ದಾರೆ. ಹಾಗಿದ್ರೆ ಇಷ್ಟುದಿನ ಏಲಿಯನ್​ಗಳ ಬಗ್ಗೆ ಮಾತನಾಡದ ನೀವು ಈಗ್ಯಾಕೆ ಇದನ್ನೆಲ್ಲಾ ಹೇಳ್ತಿದ್ದೀರಿ ಅಂತ ಕೇಳಿದ ಪ್ರಶ್ನೆಗೆ, ‘ಇದು ಟೈಂ ಮೇಲೆ ಡಿಪೆಂಡ್ ಆಗುತ್ತೆ. 5 ವರ್ಷಗಳ ಹಿಂದೆ ಇದನ್ನ ನಾನು ಹೇಳಿದ್ರೆ. ಹುಚ್ಚ ಅನ್ಕೊಂಡು ನನ್ನನ್ನ ಯಾವುದಾದ್ರೂ ಆಸ್ಪತ್ರೆಗೆ ಸೇರಿಸುತ್ತಿದ್ರು. ಈಗಲೂ ಕೆಲವರು ಹಾಗೇ ಮಾತಾಡ್ತಾರೆ ನೋಡಿ ಬೇಕಾದ್ರೆ. ಆದ್ರೆ ಬೇರೆ ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳ ಬಗ್ಗೆ ನನಗೆ ನಂಬಿಕೆ ಇದೆ. ಅವರು ನನ್ನ ಮಾತನ್ನ ನಂಬುತ್ತಾರೆ. ಏಲಿಯನ್​ಗಳ ಬಗ್ಗೆ ಸತ್ಯ ಹೇಳೋದ್ರಿಂದ ನಾನೇನು ಕಳೆದುಕೊಳ್ಳುವುದಿಲ್ಲ. ನನಗೆ ಬರಬೇಕಾದ ಅವಾರ್ಡ್​ಗಳು, ಡಿಗ್ರಿಗಳು ಬಂದಿವೆ’ ಅಂತ ಹೇಮ್ ಯಾಷ್ಡ್​ ಹೇಳಿದ್ದಾರೆ.

ಅಂದ್ಹಾಗೆ 2019ರಲ್ಲಿ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯೊಂದನ್ನ ಇಳಿಸಲು ಇಸ್ರೇಲ್​ನ SpaceIL ಮುಂದಾಗಿತ್ತು. ಅದರ ಹೆಸರು ಪ್ರಾಜೆಕ್ಟ್ ಬೆರಿಶೀಟ್ ಅಂತ. ಆದ್ರೆ ಆ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಕ್ರಾಶ್ ಲ್ಯಾಂಡ್ ಆಗಿತ್ತು. ಇತ್ತೀಚೆಗೆ ಇಂತಹದ್ದೇ ಎರಡನೇ ಪ್ರಾಜೆಕ್ಟ್​ ಬಗ್ಗೆ SpaceIL ಸಂಸ್ಥೆ ಘೋಷಿಸಿತ್ತು. ಇದರ ಬೆನ್ನಲ್ಲೇ ಹೇಮ್​ ಯಾಷ್ಡ್​ ಏಲಿಯನ್​ಗಳ ಬಗ್ಗೆ ಮಾತನಾಡಿದ್ದಾರೆ. ಸೋ ಕ್ರಾಷ್​ ಲ್ಯಾಂಡ್​​ಗೂ ಏಲಿಯನ್​ಗಳಿಗೂ ಸಂಬಂಧವಿದೆಯಾ ಅನ್ನೋದು ಗೊತ್ತಿಲ್ಲ.. ಮತ್ತೊಂದುಕಡೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಈ ಹಿಂದೆ ಸಂದರ್ಶನವೊಂದರಲ್ಲಿ ನೀವು ಏಲಿಯನ್​ಗಳ ಬಗ್ಗೆ ಕೇಳಿದ್ದೀರಾ? ಎಂಬ ಪ್ರಶ್ನೆಗೆ, ಹೌದು ನಾನು ಕೇಳಿದ್ದೀನಿ ಎಂದಿದ್ರು. ಹಾಗಿದ್ರೆ ಏಲಿಯನ್​ಗಳು ಇದಾವಾ ಅಂತ ಕೇಳಿದ್ದಕ್ಕೆ, ಅದರ ಬಗ್ಗೆ ಹೇಳಕ್ಕಾಗಲ್ಲ ಅಂತ ಹೇಳಿದ್ದರು. ಇದರ ಅರ್ಥ ಹೌದು ಅಂತ ಸಂದರ್ಶಕ ಹೇಳಿದ ಕೂಡಲೇ ಬರಾಕ್ ಒಬಾಮಾ ನಗು ನಗುತ್ತಲೇ ಉತ್ತರಿಸುತ್ತಾರೆ.

-masthmagaa.com

Contact Us for Advertisement

Leave a Reply