ದೆಹಲಿಗೆ ಬಂದಿದ್ದಾರೆ ನಾಲ್ವರು ಉಗ್ರರು..! ಗುಪ್ತಚರ ಶಾಕಿಂಗ್ ಮಾಹಿತಿ

ಪಾಕಿಸ್ತಾನ ಮೂಲದ ನಾಲ್ವರು ಜೈಷ್ ಉಗ್ರರು ದೆಹಲಿಯನ್ನು ಪ್ರವೇಶಿಸಿದ್ದಾರೆ. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ದೆಹಲಿಗೆ ಆಗಮಿಸಿರುವ ಉಗ್ರರು ಹಬ್ಬದ ಸಂದರ್ಭದಲ್ಲಿ ದಾಳಿಗೆ ಪ್ಲಾನ್ ಮಾಡುತ್ತಿದ್ದಾರೆ. ಜೊತೆಗೆ ನಾಲ್ವರು ಉಗ್ರರೂ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಗುಪ್ತಚರ ಇಲಾಖೆ ಮಾಹಿತಿ ಬೆನ್ನಲ್ಲೇ ದೆಹಲಿಯಲ್ಲಿ ಶೋಧ ಕಾರ್ಯ ಶುರುವಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ಸರ್ಚಿಂಗ್ ಆಪರೇಷನ್ ಶುರುವಾಗಿದೆ.

ನಿನ್ನೆಯಷ್ಟೇ ಅಮರಿಕಾ ಕೂಡ ಭಾರತದಲ್ಲಿ ಉಗ್ರರು ದಾಳಿ ನಡೆಸೋ ಸಾಧ್ಯತೆ ಇದೆ ಅಂತ ಎಚ್ಚರಿಸಿತ್ತು. ಅಲ್ಲದೆ ಈ ಹಿಂದೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಗಡಿಯಲ್ಲಿ 4 ಸಾವಿರ ಉಗ್ರರು ಗಡಿ ನುಸುಳಲು ಕಾದಿದ್ದಾರೆ ಎಂದು ಎಚ್ಚರಿಸಿದ್ದರು.

Contact Us for Advertisement

Leave a Reply